ಧಾರವಾಡ : ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ಅಕ್ಟೋಬರ್ 28 ರಂದು ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಇದೀಗ ಆರಂಭವಾಗಿದೆ. ಧಾರವಾಡ ದ ಕೃಷಿ ವಿಶ್ವವಿದ್ಯಾಲಯದಲ್ಲಿಮತ ಎಣಿಕೆ ನಡೆಯುತ್ತಿದೆ.
ಒಟ್ಟು 74 ಸಾವಿರದ 268ಮತಗಳಲ್ಲಿ 52 ಸಾವಿರ 68 ಮತಗಳು ಚಲಾವಣೆಗೊಂಡಿದ್ದು,ಮತ ಎಣಿಕೆಗಾಗಿ ಎರಡು ಕೊಠಡಿಗಳನ್ನು ನಿಗದಿಗೊಳಿಸಲಾಗಿದೆ, 14 ಟೇಬಲ್ ಗಳಲ್ಲಿ ಮತ ಎಣಿಕಾ ಕಾರ್ಯ ನಡೆಯುತ್ತಿದ್ದು ಮತ ಎಣಿಕೆ ಕಾರ್ಯಕ್ಕಾಗಿ ಒಟ್ಟು 64 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು ಮೂರು ಹಂತದ ಭದ್ರತೆಯನ್ನು ಒದಗಿಸಲಾಗಿದೆ .
ಮತಎಣಿಕೆಗೆ ಮೊದಲು ಎಲ್ಲಾ ಮತಎಣಿಕಾ ಸಿಬ್ಬಂದಿಗೆ ಗೌಪ್ಯತೆಯ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಬಳಿಕ ಸ್ಟ್ರಾಂಗ್ ರೂಮ್ ನಿಂದ ಮತಪೆಟ್ಟಿಗೆಗಳನು ಎಣಿಕಾ ಕೆಂದ್ರಗಳಿಗೆ ಕೊಂಡೊಯ್ಯಲಾಯಿತು
ಕೋವಿಡ್-19 ರ ಮುಂಜಾಗ್ರತಾ ಕ್ರಮಗಳನ್ನು ಮತ ಎಣಿಕಾ ಕೇಂದ್ರದಲ್ಲಿ ಕಡ್ಡಾಯವಾಗಿ ಪಾಲಿಸಲಾಗುತ್ತಿದ್ದು,ಮತ ಎಣಿಕಾ ಕೇಂದ್ರದಲ್ಲಿ ಮತ ಎಣಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ ಎಣಿಕೆ ಏಜೆಂಟ್ ರುಗಳಿಗೆ ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್,ಪಲ್ಸ್ ಆ್ಯಕ್ಸಿ ಮಿಟಿರ್ ವ್ಯವಸ್ಥೆ ಮಾಡಲಾಗಿದೆ.
Kshetra Samachara
10/11/2020 09:23 am