ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 20 ತಿಂಗಳಾದರೂ ನಡೆಯದ ಮಹಾನಗರ ಪಾಲಿಕೆ ಚುನಾವಣೆ: ನಿಂತ ನೀರಾದ ಅಭಿವೃದ್ಧಿ

ಹುಬ್ಬಳ್ಳಿ: ಅಭಿವೃದ್ಧಿಯ ಬಹುನಿರೀಕ್ಷೆಯನ್ನು ಇಟ್ಟುಕೊಂಡಿರುವ ರಾಜ್ಯದ ಎರಡನೇ ದೊಡ್ಡ ಮಹಾನಗರ ಪಾಲಿಕೆಯ ಅಭಿವೃದ್ಧಿ ಕಾರ್ಯಗಳು ನಿಂತ ನೀರಾಗಿದೆ. ಅಂದುಕೊಂಡು ರೀತಿಯಲ್ಲಿ ಅಭಿವೃದ್ಧಿಗಳಾಗದೇ ಎಲ್ಲೆ‌ಂದರಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಅಷ್ಟಕ್ಕೂ ಇಲ್ಲಿ ಆಗಿರುವುದಾದರೂ ಏನು ಅಂತೀರಾ ತೋರಸ್ತೀವಿ ನೋಡಿ...

ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದೇ ಖ್ಯಾತಿ ಪಡೆದ ರಾಜ್ಯದ ಎರಡನೇ ದೊಡ್ಡ ಮಹಾನಗರ ಪಾಲಿಕೆಯ ಚುನಾವಣೆ ಕಳೆದ ಇಪ್ಪತ್ತು ತಿಂಗಳಿನಿಂದ ನೆನೆಗುದಿಗೆ ಬಿದ್ದಿದೆ.

67 ವಾರ್ಡಗಳನ್ನು ವಿಂಗಡಿಸಿ 82ಕ್ಕೆ ಹೆಚ್ಚಿಸಲಾಗಿದೆ.ಅಲ್ಲದೇ ಮಳೆಗಾಲದಲ್ಲಿ ಸಾಕಷ್ಟು ಸಾರ್ವಜನಿಕ ಸಮಸ್ಯೆಗಳು ಎದುರಾಗುತಿದ್ದರೂ ಕೂಡ ಬಗೆಹರಿಸಲು ಮಹಾನಗರ ಪಾಲಿಕೆ ಚುನಾಯಿತ ಸದಸ್ಯರಿಲ್ಲದೇ ಸಾಕಷ್ಟು ಸಂಕಷ್ಟ ಅನುಭವಿಸುವಂತಾಗಿದೆ.

ಅವೈಜ್ಞಾನಿಕವಾಗಿ ವಾರ್ಡ್ ವಿಂಗಡಣೆ ಮಾಡಲಾಗಿದೆ ಎಂದು ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದು,ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಚುನಾವಣೆ 20 ತಿಂಗಳಾದರೂ ಕೂಡ ನಡೆದಿಲ್ಲ. ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಅಭಿವೃದ್ಧಿ ನಿಂತನೀರಾಗಿದೆ.

ಕೂಡಲೇ ಸರ್ಕಾರ ಎಲ್ಲ ಗೊಂದಲಗಳನ್ನು ಬಗೆಹರಿಸಿ ಹು-ಧಾ ಮಹಾನಗರ ಪಾಲಿಕೆ ಚುನಾವಣೆಗೆ ಘೋಷಣೆ ಹೊರಡಿಸಿ ಅವಳಿನಗರದ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಬೇಕು ಎಂಬುವುದು ಸಾರ್ವಜನಿಕರ ಒತ್ತಾಯವಾಗಿದೆ.

Edited By : Manjunath H D
Kshetra Samachara

Kshetra Samachara

09/11/2020 05:02 pm

Cinque Terre

33.72 K

Cinque Terre

2

ಸಂಬಂಧಿತ ಸುದ್ದಿ