ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಧರ್ಮವನ್ನು ರಾಜಕೀಯಕ್ಕೆ ಬಳಸಬೇಡಿ : ಮಠಮಾನ್ಯಗಳಿಗೆ ಶೆಟ್ಟರ್ ಸಲಹೆ

ಧಾರವಾಡ : ಕಾಂಗ್ರೆಸ್‌ ನವರಿಗೆ ಬೇರೆ ವಿಷಯಗಳಿಲ್ಲ ಹೀಗಾಗಿ ಎಲ್ಲದರಲ್ಲೂ ಅವರು ರಾಜಕೀಯ ಮಾಡುತ್ತಾರೆ ಸಿಬಿಐ,ಇಡಿ ದಾಳಿಯಾದರೆ ರಾಜಕೀಯ ಮಾಡುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಅನ್ಯಾಯ ಆಗಿದ್ದರೆ ನ್ಯಾಯಾಲಯಕ್ಕೆ ಹೋಗಲಿ. ಸಿಬಿಐ ಹಾಗೂ ಇಡಿ ಇಲಾಖೆ ಸರ್ಕಾರದ ಅಡಿಯಲ್ಲಿ ಕೆಲಸ ಮಾಡಬೇಕಲ್ಲವೇ? ಸಿದ್ದರಾಮಯ್ಯ ಅವರಿಗೆ ಬೇರೆ ವಿಷಯಗಳಿಲ್ಲ, ಅವರು ಸಿಎಂ ಆಗಿದ್ದವರು ಜವಾಬ್ದಾರಿ ಸ್ಥಾನದಲ್ಲಿದ್ದವರು ಯೋಚನೆ ಮಾಡಿ ಮಾತನಾಡಬೇಕು ಎಂದರು.

ಯುಪಿಎ ಸರ್ಕಾರದ ಅವಧಿಯಲ್ಲಿ ಜನಾರ್ದನ ರೆಡ್ಡಿ ಬಂಧನವಾಗಿರಲ್ಲವೇ? ಅವರನ್ನು ಜೈಲಿನಲ್ಲಿ ಇಡಲ್ಲಿಕವೇ? ಆಗ ಯುಪಿಎ ಸರ್ಕಾರವೇ ಇತ್ತಲ್ಲವೇ? ಆಗ ಅವರು ಮಾಡಿದ್ದಾದರೂ ಏನು?

ಕಾಂಗ್ರೆಸ್ ನವರು ಇಷ್ಟು ವರ್ಷ ದೇಶವನ್ನು ಆಳಿದ್ದಾರೆ ಅವರು ಎಲ್ಲವೂ ನಡೆಯುತ್ತೆ ಅಂದುಕೊಂಡಿದ್ದರು ಆದರೆ ಇವತ್ತು ತನಿಖೆ ನಡೆಯುತ್ತಿದೆ ಹೀಗಾಗಿ ಏನು ಮಾಡಬೇಕೆನ್ನೋದು ಗೊತ್ತಾಗುತ್ತಿಲ್ಲ ತಪ್ಪು ಮಾಡದಿದ್ದರೆ ಭಯ ಪಡುವ ಅಗತ್ಯವೇ ಇಲ್ಲ ಎಂದು ಹೇಳಿದರು.

ವಿನಯ್ ಗೆ ಸ್ವಾಮೀಜಿ ಬೆಂಬಲದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಕರಣಗಳನ್ನು ಧರ್ಮಕ್ಕೆ, ರಾಜಕೀಯಕ್ಕೆ ಬಳಸಿಕೊಳ್ಳಬಾರದು ಹಾಗೆ ಮಾಡೋದು ತಪ್ಪು ಸಿಬಿಐ ತಪ್ಪು ಮಾಡಿದರೆ, ಕೋರ್ಟ್ ನಲ್ಲಿ ಹೋರಾಟ ಮಾಡಲಿ ಎಂದು ಹೇಳಿದರು.

Edited By : Manjunath H D
Kshetra Samachara

Kshetra Samachara

08/11/2020 08:28 pm

Cinque Terre

78.74 K

Cinque Terre

6

ಸಂಬಂಧಿತ ಸುದ್ದಿ