ಹುಬ್ಬಳ್ಳಿ:ಮಾಜಿ ಸಚಿವ ವಿನಯ ಕುಲಕರ್ಣಿ ಸಿಬಿಐ ವಿಚಾರಣೆಯಲ್ಲಿರುವ ಹಿನ್ನೆಲೆಯಲ್ಲಿ ವಿನಯ ಕುಲಕರ್ಣಿ ಭೇಟಿ ಮಾಡಲು ಕುಟುಂಬಸ್ಥರು ಬರ್ತ್ ಡೇ ಕೇಕ್ ಮೂಲಕ ಹುಬ್ಬಳ್ಳಿಯ ಹೊರ ವಲಯದ ಸಿಎಆರ್ ಮೈದಾನಕ್ಕೆ ಆಗಮಿಸಿದರು.
ಇಂದು ವಿನಯ ಕುಲಕರ್ಣಿ ಜನ್ಮದಿನ ಹಿನ್ನೆಲೆ ಭೇಟಿಗಾಗಿ ಕುಟುಂಬಸ್ಥರಿಗೆ ಸಿಬಿಐ ಅಧಿಕಾರಿಗಳು ಅವಕಾಶ ಕೊಟ್ಟಿದ್ದು,ವಿನಯ ಕುಲಕರ್ಣಿ ಪತ್ನಿ ಹಾಗೂ ಮಕ್ಕಳ ಆಗಮಿಸಿದ್ದಾರೆ.ಪತ್ನಿ ಶಿವಲೀಲಾ, ಮಕ್ಕಳಾದ ವೈಶಾಲಿ, ದೀಪಾಲಿ,ಹೇಮಂತ್ ಆಗಮಿಸಿದ್ದು,ತಂದೆ ಭೇಟಿಗೆ ಆಗಮಿಸಿದ ಮಕ್ಕಳು "HAPPY BIRTHDAY OUR HERO" ಎಂದು ಬರೆದಿದ್ದು, ಕೇಕ್ ಸಮೇತ ಬಂದಿದ್ದಾರೆ.
ಇನ್ನೂ ವಿನಯ ಕುಲಕರ್ಣಿ ಬೆಂಬಲಿಗರನ್ನು ಚದುರಿಸಲು ಪೊಲೀಸರು ಹರಸಾಹಸಪಟ್ಟರು.ಅಲ್ಲದೇ ಇದೇ ವೇಳೆ ಕೆಲಕಾಲ ಮಾತಿನ ಚಕಮಕಿ ನಡೆಯಿತು
Kshetra Samachara
07/11/2020 04:30 pm