ಧಾರವಾಡ- ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ತಮ್ಮ ಜನ್ಮ ದಿನದ ಕುರಿತಾಗಿ ಹೀಗೆ ಹೇಳಿದ್ದರು.
ಹೌದು! 'ನಾ ಹುಟ್ಟಿದ್ದ ಏಳು ಹನ್ನೊಂದಕ್ಕ' ಎಂದು ಸ್ವತಃ ವಿನಯ್ ಕುಲಕರ್ಣಿ ಅವರು 2017ರಲ್ಲಿ ತಮ್ಮ ಜನ್ಮದಿನ ಆಚರಣೆ ಸಂದರ್ಭದಲ್ಲಿ ಹೇಳಿದ್ದರು. 2017ರ ನವೆಂಬರ್ 7 ರಂದು ಬಸವ ತತ್ವ ಸಂಘಟನೆಗಳು ವಿನಯ್ ಕುಲಕರ್ಣಿ ಜನ್ಮದಿನಕ್ಕೆ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದರು.
ಆಗ ವಿನಯ್ ಕುಲಕರ್ಣಿ ಅವರು ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವರಾಗಿದ್ದರು. ಅಂದು ಧಾರವಾಡದ ಹಳೆಯ ಎಪಿಎಂಸಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ವಿನಯ್ ಕುಲಕರ್ಣಿ ಮಾತನಾಡಿದ್ದರು. 'ಈ ಮಟ್ಟಕ್ಕೆ ಬೆಳೆಯಬೇಕಾದರೆ ಅದಕ್ಕೆ ಹತ್ತಾರು ವರ್ಷಗಳ ಶ್ರಮ ಇದೆ. ಕಾರ್ಯಕರ್ತರು ಹಾಗೂ ನನ್ನ ಕ್ಷೇತ್ರದ ಮತದಾರರ ಬೆಂಬಲ ನನ್ನ ಹಿಂದಿದೆ. ಸೋಲು ಗೆಲುವು ಎರಡನ್ನೂ ಅನುಭವಿಸಿದ್ದೇನೆ. ನಾ ಹುಟ್ಟಿದ್ದೇ ಏಳು ಹನ್ನೊಂದಕ್ಕೆ. ಎಂದಿದ್ದರು.
ಏನಿದು ಏಳು-ಹನ್ನೊಂದು?
7ನೇ ದಿನಾಂಕ, 11ನೇ ತಿಂಗಳು. ಇದು ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಜನ್ಮ ದಿನ. ಇದನ್ನೇ ಅವರು 'ನಾ ಹುಟ್ಟಿದ್ದ ಏಳು ಹನ್ನೊಂದಕ್ಕ ಎಂದಿದ್ದರು. ಉತ್ತರ ಕರ್ನಾಟಕ ಭಾಗದಲ್ಲಿ 'ಏಳು ಹನ್ನೊಂದಕ್ಕ' ಎಂಬ ನಾಣ್ಣುಡಿ ಬಳಕೆಯಲ್ಲಿದೆ. ಈ ನಾಣ್ಣುಡಿಯು ಶ್ರಮದ ಹಿನ್ನೆಲೆಯನ್ನು ಅರ್ಥೈಸುತ್ತದೆ.
Kshetra Samachara
07/11/2020 02:03 pm