ಕಲಘಟಗಿ:ಪಟ್ಟಣ ಪಂಚಾಯತಿ ಅಧ್ಯಕ್ಷರಾಗಿ ಬಿಜೆಪಿಯ ಅನಸೂಯಾ ಹೆಬ್ಬಳ್ಳಿಮಠ ಹಾಗೂ ಉಪಾಧ್ಯಕ್ಷರಾಗಿ ಯಲ್ಲವ್ವ ಶಿಗ್ಲಿ ಆಯ್ಕೆಯಾಗಿದ್ದಾರೆ.
ಕಲಘಟಗಿ ಪಟ್ಟಣ ಪಂಚಾಯಿತಿಗೆ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ 17 ನೇ ವಾರ್ಡ್ ನ ಸದಸ್ಯೆ ಅನಸೂಯಾ ಹೆಬ್ಬಳ್ಳಿಮಠ 13 ಮತಗಳನ್ನು ಪಡೆದು ಆಯ್ಕೆಯಾದರು.
ಉಪಾಧ್ಯಕ್ಷರಾಗಿ 11 ನೇ ವಾರ್ಡ್ ಬಿಜೆಪಿ ಸದಸ್ಯೆ ಯಲ್ಲವ್ವ ಶಿಗ್ಲಿ ಅವಿರೋಧವಾಗಿ ಆಯ್ಕೆಯಾದರು.ನಂತರ ಶಾಸಕರಾದ ಸಿ ಎಂ ನಿಂಬಣ್ಣವರ ಮಾತನಾಡಿ,ಬಿಜೆಪಿಯ 13 ಸದಸ್ಯರ ಸಹಕಾರದಿಂದ ಪಟ್ಟಣ ಪಂಚಾಯಿತಿ ಅಧಿಕಾರ ಬಿಜೆಪಿಗೆ ಒಲೆದಿದ್ದು,ಪಟ್ಟಣ ಪಂಚಾಯತಿ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.ಚುನಾವಣಾಧಿಕಾರಿಯಾಗಿ ಅಶೋಕ ಶಿಗ್ಗಾವಿ ಕಾರ್ಯನಿರ್ವಾಹಿಸಿದರು.
Kshetra Samachara
06/11/2020 08:36 pm