ಕಲಘಟಗಿ: ಪಟ್ಟಣ ಪಂಚಾಯಿತಿ ಅಧಿಕಾರದ ಗದ್ದುಗೆ ಯನ್ನು ಬಿಜೆಪಿ ಪಕ್ಷ ಹಿಡಿದಿದ್ದು,ಮೂಲಭೂತ ಸೌಕರ್ಯ ಹಾಗೂ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಪ್ರಥಮ ಆದ್ಯತೆ ನೀಡಲಾಗುವುದು ಎಂದು ಶಾಸಕ ಸಿ ಎಂ ನಿಂಬಣ್ಣವರ ತಿಳಿಸಿದರು.
ಅವರು ನಾಗರೀಕ ಸಂಪರ್ಕ ಕಾರ್ಯಾಲಯದಲ್ಲಿ ಮಾಧ್ಯದವರನ್ನುದ್ದೇಶಿಸಿ ಮಾತನಾಡಿ,ಹದಿನೆಂಟು ತಿಂಗಳ ನಂತರ ಬಿಜೆಪಿ ಚುನಾಯಿತ 12 ಸದಸ್ಯರುಗಳ ಸಹಕಾರದಿಂದ
ಪ ಪಂ ಅಧಿಕಾರ ಒಲಿದು ಬಂದಿದ್ದು,ಜನರ ನೀರಿಕ್ಷೆಯಂತೆ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆಯನ್ನು ನೀಡಲಾಗುವುದು.ಸರಕಾರ ನಮ್ಮದೇ ಇರುವುದರಿಂದ ಮುಂಬರುವ ದಿನಗಳಲ್ಲಿ ಪಟ್ಟಣಕ್ಕೆ ಮಲಪ್ರಭಾ ನದಿ ನೀರು ತರಲಾಗುವುದು ಎಂದರು.ಜನರು ಅಧಿಕ ಮತ ನೀಡಿ ಬೆಂಬಲಿಸಿದ್ದು, ಸದಸ್ಯರು ಪಟ್ಟಣದ ಅಭಿವೃದ್ಧಿಗೆ ಶ್ರಮಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಬಸವರಾಜ ಕುಂದಗೋಳಮಠ,ತಾಲೂಕಾ ಅಧ್ಯಕ್ಷ ಬಸವರಾಜ ಶೆರೆವಾಡ,ಪ ಪಂ ಅಧ್ಯಕ್ಷೆ ಅನಸೂಯಾ ಹೆಬ್ಬಳ್ಳಿಮಠ, ಉಪಾಧ್ಯಕ್ಷೆ ಯಲ್ಲವ್ವ ಶಿಗ್ಲಿ,ಸಿ ಎಫ್ ಪಾಟೀಲ,ಬಿ ಟಿ ಅಳಗವಾಡಿ ಉಪಸ್ಥಿತರಿದ್ದರು.
Kshetra Samachara
06/11/2020 07:01 pm