ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಿಜೆಪಿಯು ಸಣ್ಣ ಪುಟ್ಟ ಪಕ್ಷಗಳನ್ನು ತುಳಿಯುವಂತ ಕೆಲಸ ಮಾಡುತ್ತಿದೆ:ಕೋನರೆಡ್ಡಿ

ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷ ಸಣ್ಣ ಪುಟ್ಟ ಪಕ್ಷದ ಮೇಲೆ ತಮ್ಮ ಪ್ರಾಬಲ್ಯ ಮೆರೆಯಲು ಹಾಗೂ ಇತರ ಪಕ್ಷದ ರಾಜಕೀಯ ಪ್ರಬಲರನ್ನು ತುಳಿಯಲು ಸಿಬಿಐ,ಇಡಿ ಇಲಾಖೆಯ ಮೂಲಕ ಕಿರುಕುಳ ನೀಡುವುದು ಸಹಜ ಪ್ರಕ್ರಿಯೆಯಾಗಿದೆ ಎಂದು ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಹೇಳಿದರು.

ಮಾಜಿ‌ ಸಚಿವ ವಿನಯ್ ಕುಲಕರ್ಣಿ ಸಿಬಿಐ ಬಂಧನ ವಿಚಾರದ ಹಿನ್ನೆಲೆಯಲ್ಲಿಂದು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು,ವಿನಯ ಕುಲಕರ್ಣಿ ನಮ್ಮ ಕ್ಷೇತ್ರದವರು ಅಂದರೆ ನಾಯಕನೂರಿನವರು.ಅಂತಹ ತಪ್ಪು ಮಾಡಿಲ್ಲ ಅಂತಾ ಸ್ವತಃ ವಿನಯ ಕುಲಕರ್ಣಿ ಅವರೇ ನನಗೆ ಹೇಳಿದ್ದಾರೆ. ಆದರೂ ಬಂಧನ ಮಾಡಿದ್ದಾರೆ. ಮಾಡಲಿ ಸತ್ಯಾಸತ್ಯತೆ ಗೊತ್ತಾಗಲಿ ಎಂದರು.

ಕಾನೂನು ಎಲ್ಲರಿಗು ಒಂದೆ, ಇದರಲ್ಲಿ ರಾಜಕೀಯ ಮಾಡಬಾರದು.ಇಂತಹ ಸಂಸ್ಥೆಗಳನ್ನ ಅಧಿಕಾರಕ್ಕೆ ಬಂದಾಗ ಪಕ್ಷಗಳು ದುರುಪಯೋಗ ಮಾಡಿಕೊಳ್ಳಬಾರದು ಎಂದು ಅವರು ಹೇಳಿದರು.

Edited By : Manjunath H D
Kshetra Samachara

Kshetra Samachara

06/11/2020 01:25 pm

Cinque Terre

34.6 K

Cinque Terre

1

ಸಂಬಂಧಿತ ಸುದ್ದಿ