ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮೊದಲು ಫೋನ್ ಕಾಲ್ ಮಾಡಿದವರನ್ನು ವಿಚಾರಣೆ ನಡೆಸಿದ ಸಿಬಿಐ

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಮೇಲೆ ಸಿಬಿಐ ಅಧಿಕಾರಿಗಳು ಹದ್ದಿನ ಕಣ್ಣು ಇರಿಸಿದ್ದಾರೆ.ಬೆಳಿಗ್ಗೆ ಧಾರವಾಡದ ಬಾರಾಕೊಟ್ರಿಯಲ್ಲಿರುವ ವಿನಯ್ ಅವರ ನಿವಾಸಕ್ಕೆ ತೆರಳಿದ ಸಿಬಿಐ ಅಧಿಕಾರಿಗಳು, ವಿನಯ್ ಅವರನ್ನು ವಶಕ್ಕೆ ಪಡೆಯುವುದರ ಜೊತೆಗೆ ಅವರ ಮೊಬೈಲ್ ನ್ನೂ ವಶಕ್ಕೆ ಪಡೆದು ಅದರಲ್ಲಿ ವಿನಯ್ ಅವರು ಮೊದಲು ಯಾರಿಗೆ ಕಾಲ್ ಮಾಡಿದ್ದರೋ ಅವರನ್ನೂ ಠಾಣೆಗೆ ಕರೆದು ವಿಚಾರಣೆ ನಡೆಸಿದ್ದಾರೆ.

ಬೆಳಿಗ್ಗೆ ವಿನಯ್ ಅವರು ತಮ್ಮ ಸಂಬಂಧಿ ನಟರಾಜ್ ಗೆ ಕಾಲ್ ಮಾಡಿದ್ದರು. ಆ ಪ್ರಕಾರ ನಟರಾಜ್ ಅವರನ್ನು ಕರೆದು ವಿಚಾರಣೆ ನಡೆಸಿದ ಸಿಬಿಐ, ವಿನಯ್ ನಿಮಗೇಕೆ ಕಾಲ್ ಮಾಡಿದ್ದರು? ಎಂದು ಪ್ರಶ್ನೆ ಮಾಡಿದ್ದಾರೆ.ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಟರಾಜ್, ಸಿಬಿಐ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ವಿನಯ್ ಅವರ ಡೇರಿಗೆ ಹಸು ಕಳುಹಿಸುವ ವಿಚಾರದ ಬಗ್ಗೆ ಫೋನ್ ಮಾಡಿ ಮಾತನಾಡಿದ್ರು. ಅದನ್ನೇ ಸಿಬಿಐ ಅಧಿಕಾರಿಗಳಿಗೆ ಹೇಳಿದ್ದೇನೆ ಎಂದಿದ್ದಾರೆ.

Edited By : Manjunath H D
Kshetra Samachara

Kshetra Samachara

05/11/2020 04:47 pm

Cinque Terre

61.66 K

Cinque Terre

0

ಸಂಬಂಧಿತ ಸುದ್ದಿ