ಬೆಂಗಳೂರು- ಮಾಜಿ ಸಚಿವ ವಿನಯ್ ಕುಲಕರ್ಣಿ ಎಂತವರು ಎಂಬುದು ಇಡೀ ಧಾರವಾಡದಲ್ಲಿ ಗೊತ್ತಿದೆ. ಸಿಬಿಐ ಅಧಿಕಾರಿಗಳು ಅವರನ್ನ ವಶಕ್ಕೆ ಪಡೆದಿರುವುದರ ಹಿಂದೆ ದಿಲ್ಲಿ ಹಾಗೂ ರಾಜ್ಯ ನಾಯಕರ ಕೈವಾಡ ಇದೆ ಎಂದು ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ವಿನಯ್ ಕುಲಕರ್ಣಿ ಸಿಬಿಐ ವಶಕ್ಕೆ ಪಡೆದಿದ್ದನ್ನು ವಿರೋಧಿಸಿ ಸುದ್ದಿಗೋಷ್ಟಿ ನಡೆಸಿದ ಅವರು ಲಿಂಗಾಯತ ಸಮಾಜದ ಮುಖಂಡ ಹಾಗೂ ಕಾರ್ಮಿಕ ಸಮಾಜದ ಮುಖಂಡರೊಬ್ಬರನ್ನು ವಶಕ್ಕೆ ಪಡೆದಿದ್ದು ಖಂಡನೀಯ ಎಂದರು.
ಹಲವು ರಾಜಕಾರಣಿಗಳು ನಮ್ಮ ಸಮುದಾಯವನ್ನು ಬಳಸಿಕೊಳ್ಳುವ ಪೃವೃತ್ತಿಯವರಾಗಿದ್ದಾರೆ. ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅಪರಾಧಿ ಅಲ್ಲದಿದ್ದರೂ ಅವರನ್ನು ವಿಚಾರಣೆಗೆ ಒಳಪಡಿಸುವುದು ಸರಿಯಲ್ಲ. ಈ ವಿಚಾರದಲ್ಲಿ ಸಿಎಂ ಸಕಾರಾತ್ಮಕ ನಿರ್ಧಾರ ಕೈಗೊಳ್ಳಬೇಕು. ನಮ್ಮ ಇಡೀ ಸಮುದಾಯ ಹಾಗೂ ಪಂಚಮಸಾಲಿ ಮಠ ವಿನಯ್ ಕುಲಕರ್ಣಿ ಅವರ ಜೊತೆಗಿದೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
Kshetra Samachara
05/11/2020 04:24 pm