ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಕೊನೆಗೂ ಭೇಟಿಯಾದ ಸಚಿವರು, ಉಪವಾಸ ಕೈ ಬಿಟ್ಟ ರೈತರು

ನವಲಗುಂದ : ನವಲಗುಂದ ಪಟ್ಟಣದಲ್ಲಿ ಮಹದಾಯಿ ಕಳಸಾ ಬಂಡೂರಿ ಯೋಜನೆಯ ಕಾರ್ಯಾರಂಭ ಸೇರಿದಂತೆ ರೈತರ ಹಲವು ಬೇಡಿಕೆಗಳಿಗಾಗಿ, ಸರತಿ ಉಪವಾಸಕ್ಕೆ ಕುಳಿತ ರೈತರನ್ನು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸೋಮವಾರ ಭೇಟಿಯಾಗಿ ಬೇಡಿಕೆ ಈಡೇರಿಕೆಯ ಭರವಸೆ ನೀಡಿದ ಹಿನ್ನೆಲೆ, ಇಂದಿಗೆ ರೈತರು ಉಪವಾಸವನ್ನು ಕೈ ಬಿಟ್ಟರು.

ಕಳೆದ 12 ದಿನಗಳಿಂದ ನಿರಂತರವಾಗಿ ಹಲವು ಬೇಡಿಕೆಗಳಿಗಾಗಿ ಸರತಿ ಉಪವಾಸ ನಡೆಸಿ, ಇಂದು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಕರ್ನಾಟಕ ರಾಜ್ಯ ಜಾತ್ಯತೀತ ಪಕ್ಷಾತೀತ ಮಹದಾಯಿ ಕಳಸಾ ಬಂಡೂರಿ ರೈತ, ಅಸಂಘಟಿತ ಕಾರ್ಮಿಕರ, ಮಹಿಳೆಯರ ರೈತ ಹೋರಾಟ ಒಕ್ಕೂಟ ಕೇಂದ್ರದ ಅಧ್ಯಕ್ಷ ಲೋಕನಾಥ ಹೆಬಸೂರ, ಹಾಗೂ ಹಲವು ರೈತರು ಇಂದಿಗೆ ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ.

ಇನ್ನು ಸ್ಥಳಕ್ಕೆ ಭೇಟಿ ನೀಡಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಒಂದು ತಿಂಗಳ ಒಳಗಾಗಿ ರೈತರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದು, ಸಧ್ಯದಲ್ಲೇ ಸಿಹಿ ಸುದ್ದಿಯನ್ನು ನೀಡುವುದಾಗಿ ರೈತರಿಗೆ ತಿಳಿಸಿದರು.

Edited By : Shivu K
Kshetra Samachara

Kshetra Samachara

02/08/2022 12:57 pm

Cinque Terre

14.39 K

Cinque Terre

0

ಸಂಬಂಧಿತ ಸುದ್ದಿ