ನವಲಗುಂದ: ಕಳೆದ ಆರು ದಿನಗಳಿಂದ ಪಟ್ಟಣದ ವೀರಗಲ್ಲಿನ ಎದುರು ಹಲವು ಬೇಡಿಕೆಗಳ ಈಡೇರಿಕೆಗಾಗಿ ಸರತಿ ಉಪವಾಸಕ್ಕೆ ಕುಳಿತ ರೈತರಿಗೆ ಮಂಗಳವಾರ ಮಾಜಿ ಶಾಸಕ ಎನ್.ಹೆಚ್ ಕೋನರಡ್ಡಿ ಅವರು ಸ್ಥಳಕ್ಕೆ ಭೇಟಿ ನೀಡಿ, ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಆದ್ರೆ ಇದುವರೆಗೂ ಸಚಿವ ಮುನೇನಕೊಪ್ಪ ಭೇಟಿ ನೀಡಿ, ಉಪವಾಸಕ್ಕೆ ಕುಳಿತ ರೈತರಿಗೆ ಸಾಂತ್ವನ ನೀಡುವ ಕೆಲಸ ಮಾಡದ ಹಿನ್ನೆಲೆಯಲ್ಲಿ ರೈತರಲ್ಲಿ ತೀವ್ರ ಅಸಮಾಧಾನ ಉಂಟಾಗಿದೆ. ಸೋಮವಾರ ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಎದುರು ಮಾಜಿ ಶಾಸಕ ಎನ್.ಹೆಚ್ ಕೋನರಡ್ಡಿ ಅವರು ಸಚಿವರಿಗೆ ರೈತರ ಅವಶ್ಯಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಎನ್.ಹೆಚ್ ಕೋನರಡ್ಡಿ ಅವರು ಸರತಿ ಉಪವಾಸಕ್ಕೆ ಕುಳಿತ ರೈತರನ್ನು ಭೇಟಿಯಾಗಿ ಬೆಂಬಲ ಸೂಚಿಸಿ, ಶಾಂತಿಯುತವಾಗಿ ನಾವು ಹೋರಾಟ ಮಾಡೋಣ ಎಂದು ರೈತರಿಗೆ ಸಾಥ್ ನೀಡಿದರು.
Kshetra Samachara
26/07/2022 06:30 pm