ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ರೈತ ಮುಖಂಡರ ಒಗ್ಗಟ್ಟಿನಲ್ಲಿ ಒಡಕು? ಸಂಶಯಕ್ಕೆ ಸಾಕ್ಷಿಯಾದ ಮೂರು ಸಮಾವೇಶ!

ನವಲಗುಂದ : ಮಹದಾಯಿ ಕಳಸಾ ಬಂಡೂರಿ ಹೋರಾಟ ರಾಷ್ಟ ಮಟ್ಟಕ್ಕೆ ಸದ್ದು ಮಾಡಿತ್ತು. ರೈತರ ಒಗ್ಗಟ್ಟು, ಶಕ್ತಿ ಬಲದಿಂದ ಇಡೀ ದೇಶವನ್ನೇ ತನ್ನತ್ತ ಸೆಳೆದಿತ್ತು. ಆದರೆ ಜುಲೈ 21ಕ್ಕೆ ನಡೆದ ರೈತ ಹುತಾತ್ಮ ದಿನಾಚರಣೆಯಲ್ಲಿ ರೈತ ಮುಖಂಡರ ಒಗ್ಗಟ್ಟು ಒಡೆದಿದೆಯೇನೋ ಎಂಬ ಸಂಶಯ ಸಾರ್ವಜನಿಕರಲ್ಲಿ ಹುಟ್ಟಿಕೊಂಡಿದೆ...

ಬಂಡಾಯದ ನಾಡು ನವಲಗುಂದದಲ್ಲಿ ರೈತ ಹೋರಾಟ ಅಂದ್ರೆ ಅದಕ್ಕೆ ಒಂದು ತಾಕತ್ತಿದೆ. ಇಂತಹ ನಾಡಲ್ಲಿ ಈ ಬಾರಿ ನಡೆದ 42 ನೇ ರೈತ ಹುತಾತ್ಮ ದಿನಾಚರಣೆಯಲ್ಲಿ ಪಟ್ಟಣದ ಲಿಂಗರಾಜ ವೃತ್ತದಲ್ಲೇ ಮೂರು ರೈತ ವೇದಿಕೆಗಳು ಸಜ್ಜಾಗಿದ್ದೇ ಈ ಎಲ್ಲಾ ಪ್ರಶ್ನೆಗಳ ಉದ್ಭವಕ್ಕೆ ಪ್ರಮುಖ ಕಾರಣವಾಗಿದೆ ಎನ್ನಬಹುದು.

ಎಸ್... ಮಲಪ್ರಭಾ ಮಹದಾಯಿ ಕಳಸಾ ಬಂಡೂರಿ ರೈತ ಹೋರಾಟ ಒಕ್ಕೂಟ, ಪಕ್ಷಾತೀತ ಹೋರಾಟ ಸಮಿತಿ, ಮಹದಾಯಿ ಕಳಸಾ ಬಂಡೂರಿ ರೈತ ಹೋರಾಟ ಒಕ್ಕೂಟ ಹಾಗೂ ಕೋನರಡ್ಡಿ ಅಧ್ಯಕ್ಷತೆಯ ಮಹದಾಯಿ ರೈತಪರ ಹೋರಾಟ ಸಮಿತಿ. ಮೂರು ಸಮಿತಿಗಳ ಮೂರು ವೇದಿಕೆ ಮೇಲೆ ರೈತ ಹುತಾತ್ಮ ದಿನಾಚರಣೆ ಸಮಾವೇಶಗಳು ನೆರವೇರಿದವು. ಈ ಬಗ್ಗೆ ಸುಭಾಷ್ ಚಂದ್ರಗೌಡ ಪಾಟೀಲ ಹೇಳಿದ್ದು ಹೀಗೆ...

ಅದೇನೇ ಇರಲಿ ರೈತರ ಹೋರಾಟದ ದಾರಿ ಬೇರೆ ಬೇರೆ ಆದ್ರೂ ಸಹ ಉದ್ದೇಶ ಒಂದೇ. ರೈತರು ಒಗ್ಗಟ್ಟಿನಿಂದ ಹಕ್ಕಿಗಾಗಿ ಹೋರಾಡ ಬೇಕಿದೆ. ಅಂದರೆ ಮಾತ್ರ ಜಯ ಸಿಗಲಿದೆ ಎಂಬುದು ಅನೇಕರ ಅಭಿಪ್ರಾಯವಾಗಿದೆ.

-ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By : Shivu K
Kshetra Samachara

Kshetra Samachara

22/07/2022 03:02 pm

Cinque Terre

16.98 K

Cinque Terre

1

ಸಂಬಂಧಿತ ಸುದ್ದಿ