ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಕಡಲೆ ಖರೀದಿ ಕೇಂದ್ರದ ಸದ್ಬಳಕೆಯಾಗಲಿ - ಶಾಸಕಿ ಕುಸುಮಾವತಿ

ಕುಂದಗೋಳ: ಕಳೆದ ಎರೆಡು ವರ್ಷಗಳಿಂದ ರೈತರ ಬದುಕು ಅತಿವೃಷ್ಟಿ, ಕೊರೊನಾ ವೈರಸ್ ಸುಳಿಗೆ ಸಿಲುಕಿ ಕಷ್ಟದಲ್ಲಿದೆ. ಇದೀಗ ಉತ್ತಮವಾದ ಹಿಂಗಾರು ಕಡಲೆ ಬೆಳೆಗೆ 5,230 ರೂಪಾಯಿ ಬೆಂಬಲ ಬೆಲೆ ಸರ್ಕಾರ ನೀಡಿದೆ.ರೈತರು ಈ ಯೋಜನೆ ಬಳಸಿಕೊಳ್ಳಿರಿ ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.

ಅವರು ಕುಂದಗೋಳ ತಾಲೂಕಿನ ಯರೇಬೂದಿಹಾಳ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಡಲೆ ಖರೀದಿ ಕೇಂದ್ರವನ್ನು ಅಭಿನವ ಕಲ್ಯಾಣಪುರ ಬಸವಣ್ಣನವರ ದಿವ್ಯ ಸಾನಿಧ್ಯದಲ್ಲಿ ಉದ್ಘಾಟಿಸಿ ಮಾತನಾಡಿ, ಸ್ಥಳೀಯ ರೈತರ ಬೇಡಿಕೆಯಂತೆ ಯರೇಬೂದಿಹಾಳ ಗ್ರಾಮದಲ್ಲಿ ಕಡಲೆ ಕೇಂದ್ರ ತೆರೆದಿದೆ, ರೈತರು ಈ ಪ್ರಯೋಜನ ಪಡೆಯಿರಿ ಎಂದರು.

ಈ ಸಂದರ್ಭದಲ್ಲಿ ಯರೇಬೂದಿಹಾಳ ಗ್ರಾಮದ ಪ್ರಗತಿಪರ ರೈತ ಫಕ್ಕೀರಪ್ಪ ಗೊರವರ, ಪರಪ್ಪ ಕಾರಡಗಿ, ಸಿದ್ದಣ್ಣ ಕಟ್ಟಿಮನಿ ಅವರಿಗೆ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ಕೃಷಿ ಉತ್ಪನ್ನ ರಫ್ತು ನಿಗಮದ ಅಧ್ಯಕ್ಷ ಎಸ್.ಐ.ಚಿಕ್ಕನಗೌಡರ, ಬಿಜೆಪಿ ಮುಖಂಡ ಎಮ್.ಆರ್‌.ಪಾಟೀಲ, ಮಾಜಿ ಜಿಪಂ ಸದಸ್ಯ ಉಮೇಶ್ ಹೆಬಸೂರ ಅನೇಕರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

07/03/2022 01:09 pm

Cinque Terre

19.7 K

Cinque Terre

0

ಸಂಬಂಧಿತ ಸುದ್ದಿ