ಅಣ್ಣಿಗೇರಿ; ಕೇಂದ್ರ ಹಾಗೂ ರಾಜ್ಯ ಸರಕಾರ ಬೆಂಬಲ ಬೆಲೆಯ ಕಡಲೆ ಖರೀದಿ ಕೇಂದ್ರವನ್ನು ಬರಿ ಬಾಯಿ ಮಾತಲ್ಲಿ ಪ್ರಾರಂಭಿಸುತ್ತೇವೆ ಎಂದು ಹೇಳಿದರೆ ಸಾಲದು ಅದನ್ನು ಕಾರ್ಯರೂಪಕ್ಕೆ ತರಬೇಕು ಎಂದು ಜೆಡಿಎಸ್ ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಅಂಗಡಿಯವರು ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭ ಮಾಡಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಗಳ ರೈತರು ಈಗಾಗಲೇ ಕಡಲಿ ಒಕ್ಕಲಿ ಪ್ರಾರಂಭ ಮಾಡಿದ್ದಾರೆ,ಕೆಲ ರೈತರು ದಲ್ಲಾಳಿಗಳ ಮುಖಾಂತರ ಕಡಲಿ ಮಾಡುತ್ತಿರುವುದರಿಂದ ಅವರಿಗೆ ತುಂಬಾ ನಷ್ಟವಾಗುತ್ತಿದೆ. ಒಂದು ವಾರದೊಳಗೆ ಕಡಲೆ ಖರೀದಿ ಕೇಂದ್ರ ಆರಂಭ ಮಾಡದಿದ್ದರೆ, ಫೆಬ್ರುವರಿ 14 ರಿಂದ ಆಮರಣ ಉಪವಾಸ ಸತ್ಯಾಗ್ರಹ ಮಾಡಲಾಗುತ್ತಿದೆ ಎಂದು ತಿಳಿಸಿದರು.
Kshetra Samachara
09/02/2022 08:45 pm