ಕುಂದಗೋಳ : ನಮಸ್ಕಾರ ರೀ ಕುಂದಗೋಳ ಮಹಾ ಜನತೆ, ನಿಮ್ಮ ತಾಲೂಕಿನ ರೈತರನ್ನು ಅಭಿವೃದ್ಧಿ ಪಡಿಸೋಕೆ ಸರ್ಕಾರದ ಸೌಲಭ್ಯ ಅನುಷ್ಠಾನ ಮಾಡೋಕೆ ಈ ಹಿರಿಯ ಸಹಾಯಕ ತೋಟಗಾರಿಕೆ ಇಲಾಖೆ ಮತ್ತು ಅಧಿಕಾರಿಗಳು ಇದ್ದಾರೋ ? ಇಲ್ಲವೋ ? ಎಂಬ ಪ್ರಶ್ನೆ ರೈತರಿಗೆ ಕಾಡ್ತಾ ಇದೆ ನೋಡಿ.
ಹೌದು ! ಸ್ವಾಮಿ ನಿತ್ಯ ಕಚೇರಿಗೆ ಬರುವ ರೈತರಿಗೆ ಅಧಿಕಾರಿಗಳೇ ಸಿಗೋದೆ ಕಷ್ಟ, ಯಾಕೆ ಅಂದ್ರಾ ? ಇಲ್ಲಿರೋದು ಪ್ರಭಾರಿ ಹಿರಿಯ ತೋಟಗಾರಿಕೆ ಸಹಾಯಕ ಅಧಿಕಾರಿ ಅವ್ರು ಯಾವಾಗ ಕಚೇರಿಯಲ್ಲಿ ಇರ್ತಾರೊ ರೈತರಿಗೆ ಗೊತ್ತಿಲ್ಲಾ, ಇದರ ನಡುವೆ ತಮ್ಮ ಅಗತ್ಯ ಕೆಲಸಕ್ಕೆ ಅಲೆದಾಡಿ ಬೇಸತ್ತ ರೈತರು ಅಧಿಕಾರಿಗಳ ಜೊತೆ ವಾಗ್ವಾದಕ್ಕೆ ಒಳಗಾಗುವ ಸ್ಥಿತಿ ಸಹಜವಾಗಿದೆ.
ಮುಖ್ಯವಾಗಿ ಈ ಇಲಾಖೆಯ ಸಹಾಯಕ ತೋಟಗಾರಿಕೆ ಅಧಿಕಾರಿಗಳ ಎರೆಡು ಹುದ್ದೆ, ಕಂಪ್ಯೂಟರ್ ಆಪರೇಟರ್ ಹುದ್ದೆ ಖಾಲಿ ಇದ್ದು ರೈತರ ಕೆಲಸಾ ದಿನ ಕಳಿತಾ ಇದ್ರೇ, ಇತ್ತ ಕಿರಿಯ ತೋಟಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ಮೂರು ತಿಂಗಳ ಸಂಬಳ ಇಲ್ಲದೆ ಕೂತಿದ್ದಾರೆ.
ತನ್ನ ಇಲಾಖೆ ಅಧಿಕಾರಿಗಳಿಗೆ ಸಂಬಳ ಕೊಡದೆ ತೋಟಗಾರಿಕೆ ಇಲಾಖೆ ಪ್ರಧಾನಮಂತ್ರಿ ಫಸಲ್ ಬೀಮಾ ಜಂಟಿ ಕಾರ್ಯ, ಬೆಳೆ ಸಮೀಕ್ಷೆ, ಹಿಂಗಾರು ಬೆಳೆ ಸಮಿಕ್ಷೇ, ಅಷ್ಟೇ ಯಾಕೆ ? ಅತಿವೃಷ್ಟಿಗೆ ಅಳಿದುಳಿದ ರೈತರ ಬೆಳೆ ರೋಗಕ್ಕೆ ಪರಿಹಾರ ಕೊಡಲು ಸಂಪೂರ್ಣ ವಿಫಲವಾಗಿ ಇಲಾಖೆ ಯೋಜನೆ ಅನುಷ್ಠಾನ ಮರೆತಿದೆ. ಈ ಬಗ್ಗೆ ಜಿಲ್ಲಾ ತೋಟಗಾರಿಕೆ ಇಲಾಖೆ ಅಧಿಕಾರಿಗಳೇ ಗಮನಿಸಿ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
07/01/2022 05:25 pm