ಹುಬ್ಬಳ್ಳಿ: ಕೃಷಿ ಕಾಯ್ದೆ ಪ್ರಯೋಗ ಆಗಲಿ.ಒಂದೆರೆಡು ವರ್ಷ ಪ್ರಯೋಗ ಆಗಲಿ.ಅವಾಗ ರೈತರಿಗೆ ತೊಂದರೆಯಾದ್ರೆ ವಾಪಸ್ ಪಡೆಯೋಕೆ ತಯರಾಗ್ತಾರೆ.ಯಾವ ಸರ್ಕಾವೂ ರೈತರಿಗೆ ತೊಂದರೆ ನೀಡುವ ಕೆಲಸ ಮಾಡಲ್ಲ ಎಂದು ಬೃಹತ್ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ನಾಳೆ ರೈತರಿಂದ ಟ್ರ್ಯಾಕ್ಟರ್ ಪರೇಡ್ ಹಿನ್ನಲೆಯಲ್ಲಿಂದು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು,ಮೋದಿಯವರ ಬಗ್ಗೆ ಅಪಾದನೆ ಮಾಡೋಕೆ ಏನು ಇಲ್ಲ.ಇಡೀ ಜಗತ್ತಿನಲ್ಲಿ ಮೋದಿ ಪ್ರಬಲ ಜನಪ್ರಿಯ ನಾಯಕ.ಮೋದಿ ವ್ಯಕ್ತಿತ್ವಕ್ಕೆ ಕುಂದು ತರೊ ಕೆಲಸ ಕಾಂಗ್ರೆಸ್ ವಿಪಕ್ಷ ಮಾಡುತ್ತಿವೆ.ಕಾಂಗ್ರೆಸ್ ಕುಮ್ಮಕ್ಕಿನಿಂದ ಇವೆಲ್ಲಾ ನಡೆಯುತ್ತಿವೆ.ನಿಜವಾದ ರೈತರು ಹೋರಾಟದಲ್ಲಿ ಭಾಗವಹಿಸುತ್ತಿಲ್ಲ.ರಾಜಕಾರಣ ಸಲುವಾಗಿ ಈ ರೀತಿ ಕೆಲಸ ಮಾಡಲಾಗುತ್ತಿದೆ ಎಂದರು.
ಇಷ್ಟು ವರ್ಷದಿಂದ ಎಪಿಎಂಸಿ ಇದೆ ಯಾಕೆ ರೈತರಿಗೆ ಒಳ್ಳೆಯದಾಗಿಲ್ಲ..? ಎಪಿಎಂಸಿ ನೋಡ್ತಿರೋ ರೈತರ ಹಿತಾಸಕ್ತಿ ನೋಡ್ತಿರೋ...ಎಪಿಎಂಸಿ ಮುಚ್ಚಿದ್ರೆ ಏನಾತು..ರೈತರಿಗೆ ಯೊಗ್ಯವಾದ ಬೆಲೆ ಸಿಗಬೇಕು.ಅದು ಎಲ್ಲಿಯಾದ್ರು ಸರಿ, ಅವರೇ ಬಂದು ಖರೀದಿ ಮಾಡಲಿ.ರೈತರಿಗೆ ತೊಂದರೆಯಾದಾಗ ಮೋದಿ ಸರ್ಕಾರ ಅವರ ಜೊತೆಗಿರುತ್ತದೆ ಎಂದು ಅವರು ಹೇಳಿದರು.
Kshetra Samachara
25/01/2021 01:07 pm