ಧಾರವಾಡ: ಹುಬ್ಬಳ್ಳಿ- ಧಾರವಾಡ ಮಹಾನಗರಕ್ಕೆ ಮಹಾತ್ಮ ಗಾಂಧೀಜಿ ಭೇಟಿ ನೀಡಿ 2020ರ ನ. 10 ಮತ್ತು 11ಕ್ಕೆ ನೂರು ವರ್ಷ ಆಗಲಿದೆ.ಇದರ ಸಮರ್ಥವಾಗಿ ಹು-ಧಾ ಅವಳಿನಗರದಲ್ಲಿ ನ. 10 ಮತ್ತು 11ರಂದು ವಿವಿಧ ಸಂಘಟನೆಗಳಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಾಷಾ ತಜ್ಞ ಗಣೇಶ ದೇವಿ ಹೇಳಿದರು.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗಾಂಧೀಜಿ 1920ರಲ್ಲಿ ನ10, 11ರಂದು ಅವಳಿನಗರಕ್ಕೆ 1920ರ ದಶಕದಲ್ಲಿ ಗಾಂಧೀಜಿ ಅವರು ಕರ್ನಾಟಕಕ್ಕೆ ಹಲವು ಬಾರಿ ಭೇಟಿ ನೀಡಿಮೊದಲ ಬಾರಿಗೆ ಧಾರವಾಡ ಮತ್ತು ಹುಬ್ಬಳ್ಳಿಗೆ ನವೆಂಬರ್ 10 ಮತ್ತು 11 ರಂದು ಭೇಟಿ ನೀಡಿ ಸ್ವಾತಂತ್ರ್ಯ ಹೋರಾಟಗಾರರನ್ನು ಪ್ರೋತ್ಸಾಹಿಸಿದ್ದರು ಎಂದರು.
ಈ ಸಂದರ್ಭದಲ್ಲಿ ಡಾ.ಪ್ರೊ.ಮಾಲತಿ ಪಟ್ಟಣಶೆಟ್ಟಿ,ವಿಜಯ ಗುಟ್ರಾಳ,ಶಂಕರ್ ಹಲಗತಿ,ಎ.ಎಮ್ ಖಾನ್,ಡಾ.ಸಂಜೀವ ಕುಲಕರ್ಣಿ ಸೇರಿದಂತೆ ಇತರರು ಇದ್ದರು.
Kshetra Samachara
04/11/2020 12:33 pm