ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಗ್ಗಂಟಾದ ಪ.ಪಂ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನ 12 ಸದಸ್ಯರಿಗೆ ವ್ಹೀಪ್ ಜಾರಿ

ಕುಂದಗೋಳ : ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನದ ಮೀಸಲಾತಿ ಹೊರಬಿದ್ದಿದ್ದೆ ತಡ ಬಿಜೆಪಿ ಸದಸ್ಯರು ಅಧ್ಯಕ್ಷ ಸ್ಥಾನದ ಪ್ರಬಲ ಪೈಪೊಟಿಗೆ ಇಳಿದು ಪಕ್ಷದ ವರಿಷ್ಠರು ಕಚೇರಿ ಬಾಗಿಲು ತಟ್ಟಿದ್ರೂ ಈ ಬಗ್ಗೆ ಯಾರಿಗೆ ಮಣೆಹಾಕಿದ್ರೂ ಒಬ್ಬರಿಗೊಬ್ಬರ ಅಸಮಾಧಾನ ತಿಳಿದು ವಿಚಾರ ಅಲ್ಲಿಗೆ ನಿಂತಿತ್ತು.

ಈಗ ನವೆಂಬರ್ 6 ರಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ದಿನಾಂಕ ನಿಗದಿಯಾಗಿದ್ದು ಪಕ್ಷದ ಸಿದ್ಧಾಂತ ತಕ್ಕಂತೆ ಪಡೆದುಕೊಳ್ಳುವಂತೆ ಬಿಜೆಪಿ ವರಿಷ್ಠರು ತಾಕೀತು ಮಾಡಿ 12 ಸದಸ್ಯರಿಗೂ ವ್ಹೀಪ್ ಜಾರಿ ಮಾಡಿದ್ದಾರೆ, ಇನ್ನು ಕಗ್ಗಂಟಾದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ 5 ವರ್ಷದ ಅವಧಿಗೆ 10 ತಿಂಗಳಂತೆ 5 ಸದಸ್ಯರಿಗೆ ಹಂಚಿಕೆಯಾಗುವ ಸಾಧ್ಯತೆಯ ಲಕ್ಷಣಗಳು ಎದ್ದು ತೋರುತ್ತಿವೆ.

ಈಗಾಗಲೇ ನಿಗದಿಯಾಗಿರೋ ಚುನಾವಣೆಯಲ್ಲಿ ಮೊದಲು ಪಟ್ಟಣ ಪಂಚಾಯಿತಿ ಅಧ್ಯಕ್ಷ ‌ಸ್ಥಾನದ ಗದ್ದುಗೆ ಹಿಡಿಯೋರ್ರ್ಯಾರು ? ಎಂಬುದು ಬಿಜೆಪಿ ಸದಸ್ಯರನ್ನ ಮತ್ತಷ್ಟು ಸ್ಪರ್ಧೆಗೆ ಎಡೆಮಾಡಿಕೊಟ್ಟ ಕಾರಣ ಈ ಕುರಿತು ಮತ್ತೋಮ್ಮೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಲ್ಲಾದ ಜೋಶಿ, ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ, ಮಾಜಿ‌ ಜಿಲ್ಲಾ ಅಧ್ಯಕ್ಷ ಎಂ.ಆರ್.ಪಾಟೀಲ ಎಲ್ಲರೂ ನವೆಂಬರ್ 5 ಒಳಗಾಗಿ ಮತ್ತೇ ಸಭೆ ಸೇರಿ ಈ ವಿಷಯ ಕುರಿತು ಚರ್ಚಿಸಿ ನಿರ್ಧಾರ ಪ್ರಕಟಿಸುವ ಸಾಧ್ಯತೆ ಹೆಚ್ಚಿದೆ.

Edited By : Nirmala Aralikatti
Kshetra Samachara

Kshetra Samachara

02/11/2020 03:35 pm

Cinque Terre

12.35 K

Cinque Terre

0

ಸಂಬಂಧಿತ ಸುದ್ದಿ