ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಏನಪ್ಪಾ ಡಿಕೆಶಿ ನಯಾಪೈಸೆ ಖರ್ಚು ಮಾಡದೇ ಚುನಾವಣೆ ಮಾಡ್ತಿಯಾ

ಹುಬ್ಬಳ್ಳಿ; ಜೋಡೆತ್ತು ಬರಲಿ..ಯಾರೇ ಬರಲಿ.. ಶಿರಾ ಮತ್ತು ಆರ್.ಆರ್.ನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ದೊಡ್ಡ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು,ಎರಡು ಕ್ಷೇತ್ರಗಳಲ್ಲಿ ಮುಖ್ಯಮಂತ್ರಿಗಳು ಪ್ರಚಾರಕ್ಕೆ ಹೋಗುತ್ತಿದ್ದಾರೆ.ಎರಡು ಕ್ಷೇತ್ರಗಳಲ್ಲಿ ಈಗಾಗಲೇ ಬಿಜೆಪಿ ಗೆದ್ದಿದೆ, ಎಷ್ಟು ಅಂತರದಿಂದ ಗೆಲ್ಲುತ್ತೇವೆ ಅನ್ನೊದಷ್ಟೆ ನೋಡುತ್ತಿದ್ದೇವೆ ಎಂದರು.

ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಗೆ ಸೋಲಿನ‌ ಭೀತಿ ಶುರುವಾಗಿದೆ.ಕಾಂಗ್ರೆಸ್ ಸೋಲು ನಿಶ್ಚಿತವಾಗಿದ್ದು, ಹತಾಶೆಯಿಂದ ಮಾತನಾಡುತ್ತಿದ್ದಾರೆ.ಬಿಜೆಪಿ ಹಣದ ಹೊಳೆ ಹರಿಸುತ್ತಿದೆ ಎಂದು ಡಿಕೆಶಿ ಹೇಳಿಕೆ ವಿಚಾರ ಹಾಗಾದ್ರೆ ಡಿಕೆಶಿ ಬಳಿ ಹಣ ಇಲ್ವಾ, ನಯಾಪೈಸೆ ಖರ್ಚು ಮಾಡದೆ ಡಿಕೆಶಿ ಚುನಾವಣೆ ಮಾಡ್ತಿದ್ದಾರಾ? ಎಂದು ಪ್ರಶ್ನಿಸಿದರು.

Edited By : Nagesh Gaonkar
Kshetra Samachara

Kshetra Samachara

30/10/2020 12:58 pm

Cinque Terre

29.12 K

Cinque Terre

4

ಸಂಬಂಧಿತ ಸುದ್ದಿ