ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅ.28 ರಂದು ಪಶ್ಚಿಮ ಪದವೀಧರ ಮತ ಕ್ಷೇತ್ರಕ್ಕೆ ವೋಟಿಂಗ್

ಹುಬ್ಬಳ್ಳಿ: ಕರ್ನಾಟಕ ಪಶ್ಚಿಮ ಪದವೀಧರ ಮತ ಕ್ಷೇತ್ರಕ್ಕೆ ಅ.28ರಂದು ಮತದಾನ ಜರುಗಲಿದ್ದು, ಚುನಾವಣಾ ಆಯೋಗ ಸುವ್ಯವಸ್ಥಿತ ಹಾಗೂ ಶಾಂತಿಯುತ ಮತದಾನಕ್ಕೆ ಅವಕಾಶ ಕಲ್ಪಿಸಿದೆ.

ಪದವೀಧರ ಮತದಾರ ಪಟ್ಟಿಯಲ್ಲಿ ಹೆಸರು ಇರುವ ಮತದಾರರು, ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡು, ಪಾಸ್ ಪೋರ್ಟ್, ರಾಜ್ಯ, ಕೇಂದ್ರ ಹಾಗೂ ಸಾರ್ವಜನಿಕ ಉದ್ದಿಮೆಗಳನ್ನು ಅಥವಾ ಇತರೆ ಔದ್ಯಮಿಕ ಸಂಸ್ಥೆಗಳು ನೀಡಿರುವ ಗುರುತಿನ ಚೀಟಿ, ಲೋಕಸಭಾ, ವಿಧಾನ ಸಭಾ, ಪರಿಷತ್ ಸದಸ್ಯರ ಗುರುತಿನ ಚೀಟಿ, ಶಿಕ್ಷಣ ಸಂಸ್ಥೆಗಳು ನೀಡಿರುವ ಗುರುತಿನ ಚೀಟಿ, ವಿಶ್ವವಿದ್ಯಾಲಯದಿಂದ ನೀಡುರುವ ಪದವಿ, ಡಿಪ್ಲೋಮೋ ಪ್ರಮಾಣ ಪತ್ರ, ಅಂಗವಿಕಲರಿಗೆ ಸಮಕ್ಷಮ ಪ್ರಾಧಿಕಾರ ನೀಡಿದ ಪ್ರಮಾಣ ಪತ್ರದ ಮೂಲ ಪ್ರತಿಯೊಂದಿಗೆ ಆಗಮಿಸಿ ಮತದಾನ ಮಾಡಬಹದು.

ಪದವೀಧರ ಮತಕ್ಷೇತ್ರದ ಚುನಾವಣೆಯು ಪ್ರಾಶಸ್ತ್ಯ ಮತದಾನ ಪದ್ದತಿಯನ್ನು ಹೊಂದಿದೆ. ಮತದಾರರು ಮತಪತ್ರದಲ್ಲಿ ಪ್ರಾಶಸ್ತ್ಯವನ್ನು ರೋಮನ್, ಇಂಗ್ಲೀಷ್ ಅಥವಾ ಕನ್ನಡ ಅಂಕಿಗಳಲ್ಲಿ ಮಾತ್ರವೇ ನಮೂದಿಸಬೇಕು. ಪದಗಳಲ್ಲಿ ಸೂಚಿಸಿದರೆ ಮತವು ತಿರಸ್ಕೃತವಾಗುವುದು. ಮತಗಟ್ಟೆಯೊಳಗೆ ಯಾವುದೇ ರೀತಿಯ ಪೆನ್ನು, ಇಂಕ್, ಕಡ್ಡಿ ಪೊಟ್ಟಣ, ಲೈಟರ್, ಪಾನೀಯ ಬಾಟಲಿಗಳನ್ನು ಒಯ್ಯುವ ಹಾಗಿಲ್ಲ. ಮತಗಟ್ಟೆಯೊಳಗೆ ಮೊಬೈಲ್, ಕ್ಯಾಮರಾ, ತಿಂಡಿ ತಿನಿಸು, ಯಾವುದೇ ರೀತಿಯ ಆಯುಧಗಳನ್ನು ತರವುದನ್ನು ನಿಷೇಧಿಸಲಾಗಿದೆ. ಮತಗಟ್ಟೆ ಅಧಿಕಾರಿ ನೀಡುವ ನೇರಳೆ ಬಣ್ಣದ ಸ್ಕೆಚ್ ಪೆನ್ನು ಬಳಸಿ ಮತದಾನ ಮಾಡಬೇಕು. ಬೆಳಿಗ್ಗೆ 8ರಿಂದ ಸಂಜೆ 5 ಗಂಟೆಯ ಒಳಗಾಗಿ ಮತದಾನ ಮಾಡಬೇಕು. ಮತಗಟ್ಟೆ ಮಾಸ್ಕ್ ಧರಿಸಿ ಆಗಮಿಸಿಬೇಕು. ಮತದಾನದ ಸಮಯದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಸ್ವೀಪ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Edited By : Vijay Kumar
Kshetra Samachara

Kshetra Samachara

27/10/2020 07:36 pm

Cinque Terre

16.6 K

Cinque Terre

0

ಸಂಬಂಧಿತ ಸುದ್ದಿ