ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಹದಿನೈದು ನಿಮಿಷದಲ್ಲಿ ಚೈನಾ ಸೈನಿಕರು ಹೊರಹಾಕುವ ಹೇಳಿಕೆ ಹಾಸ್ಯಾಸ್ಪದ- ಕೇಂದ್ರ ಸಚಿವ ಜೋಶಿ ಲೇವಡಿ

ಹುಬ್ಬಳ್ಳಿ- ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಹದಿನೈದು ನಿಮಿಷದಲ್ಲಿ ಚೀನಾದ ಸೈನಿಕರನ್ನು ಹೊರಹಾಕುವ ಬಗ್ಗೆ ಹೇಳಿಕೆ ನೀಡುತ್ತಾರೆ. ಅವರ ಪಕ್ಷದ ನಾಯಕರೇ ಅವರ ಹೇಳಿಕೆ ಕೇಳಿ‌ ನಗುತ್ತಾರೆ. ಈ ರೀತಿ ಕಾಂಗ್ರೆಸ್ ಪ್ರತಿಸಾರಿನೂ ಹಾಸ್ಯಾಸ್ಪದ ಹೇಳಿಕೆ ನೀಡುತ್ತಿದೆ. ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿ ಕಾರಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆ ಸರ್ಕಾರದ ಮೇಲೆ ಪ್ರಭಾವ ಬೀರದೇ ಇದ್ದರೂ ಮಹತ್ವದ ಚುನಾವಣೆ ಆಗಿದೆ. ಕಾಂಗ್ರೆಸ್ ಗೆ ಸಂವಿಧಾನದ ಮೇಲೆ, ಮೂಲ ನಂಬಿಕೆಗಳ ಮೇಲೆ ವಿಶ್ವಾಸ ಇಲ್ಲ, ಸತತವಾಗಿ ಅವಹೇಳನಕಾರಿ ಮಾಡುವ ಪ್ರವೃತ್ತಿ ಮುಂದುವರೆಸಿಕೊಂಡು ಬಂದಿದ್ದಾರೆ. ಹಲವು ಬಿಲ್ ಗಳು ಪಾಸ್ ಆಗಿ ಕಾಯಿದೆಗಳು ಜಾರಿಗೊಂಡಿವೆ, ಇಂತಹ ವೇಳೆ ಡ್ಯೆಪ್ಯೂಟಿ ಸ್ಪೀಕರ್ ಮೇಲೆ ಹಲ್ಲೆಮಾಡಿ ತಡೆಯುವ ಯತ್ನ ಆಯಿತು. ಇದೆಲ್ಲವೂ ಗಿಮಿಕ್ ಎಂದರು. ದೇಶದ ಪ್ರಧಾನ ಮಂತ್ರಿ, ರಾಜ್ಯದ ಮುಖ್ಯಮಂತ್ರಿ ಸುಸೂತ್ರವಾಗಿ ಅಧಿಕಾರ ಮಾಡಿಕೊಂಡು ಬಂದಿದ್ದಾರೆ.

ಇವರ ಆಡಳಿತಕ್ಕೆ ಬಲ ನೀಡಲು ಈ ಚುನಾವಣೆ ಮಹತ್ವದ್ದಾಗಿದೆ. ಅತ್ಯಂತ ಸುದೀರ್ಘ ಕಾಲ ಆಡಳಿತ ನಡೆಸಿದವರು ಯಾವುದೇ ಬದಲಾವಣೆ ತರುವ ಪ್ರಯತ್ನ ಮಾಡಲಿಲ್ಲ. ಪಕ್ಷದಲ್ಲಿ ಬದಲಾವಣೆ ಬೇಕು ಅಂದವರನ್ನೇ ಕಡಗಣಿಸಿದರು, 23 ನಾಯಕರನ್ನು ಸೈಡ್ ಲೈನ್ ಮಾಡಲಾಯಿತು. ದೇಶದ, ರಾಜ್ಯದ ಆಗುಹೋಗುಗಳ ಬಗ್ಗೆ ಹಾಸ್ಯಾಸ್ಪದ ಹೇಳಿಕೆ ಕೊಡುತ್ತಿದ್ದಾರೆ ಕಾರಿದರು.

ಕಾಂಗ್ರೆಸ್ ಮನಸ್ಥಿತಿ ದೇಶವನ್ನು ಆಳಲಿಕ್ಕೆ ಬಂದವರಂತೆ ಆಡುತ್ತಿದ್ದಾರೆ,ಅದೇ ಸಮಸ್ಯೆ ಅವರನ್ನ ಕಾಡುತ್ತಿದೆ ಸಿದ್ದರಾಮಯ್ಯ ಅವರು ಮೋದಿ ಅವರ ಬಗ್ಗೆ ಯಡಿಯೂರಪ್ಪ ಅವರ ಬಗ್ಗೆ ಹಲವಾರು ಹೇಳಿಕೆ ಕೊಟ್ಟಿದ್ದಾರೆ,ಅವೆಲ್ಲವನ್ನೂ ನಾನು ಹೇಳೋದಿಲ್ಲ, ಪ್ರಮುಖವಾಗಿ ಮುಖ್ಯಮಂತ್ರಿ ವಿಚಾರವಾಗಿ ಹೇಳಿಕೆ ಬರುತ್ತಿದೆ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ ನಾಲ್ಕು ವಿಧಾನ ಪರಿಷತ್ ಮತ್ತು ಉಪ ಚುನಾವಣೆಯಲ್ಲಿ ಮೆಜಾರಿಟಿ ಮೂಲಕ ಗೆದ್ದು ಬರುತ್ತೇವೆ,ಬಿಹಾರದಲ್ಲಿಯೂ ಕೂಡು 3/4 ಮೆಜಾರಿಟಿಯಲ್ಲಿ ಬಿಜೆಪಿ ಗೆದ್ದು ಬರುತ್ತದೆ ಕಾಂಗ್ರೆಸ್ ಹಾಸ್ಯಾಸ್ಪದ ಹೇಳಿಕೆ ನೀಡುತ್ತಿದೆ,ಹದಿನೈದು ನಿಮಿಷದಲ್ಲಿ ಚೀನಾದ ಸೈನಿಕರನ್ನು ಹೊರಹಾಕುವ ಹೇಳಿಕೆ ನೀಡುತ್ತಾರೆ.

ಅವರ ಪಕ್ಷದ ನಾಯಕರೇ ಅವರ ಹೇಳಿಕೆ ಕೇಳಿ‌ನಗುತ್ತಾರೆ ಚೈನಾ ಮೊದಲು ನಮ್ಮ ಬಾರ್ಡರ್ ಆಗಿರಲಿಲ್ಲ, ಕಾಂಗ್ರೆಸ್ ಆಡಳಿತದಲ್ಲಿ ಇದ್ದಾಗ ನಡೆದುಕೊಂಡಿದ್ದರಿಂದಲೇ ಬಾರ್ಡರ್ ಆಗಿದೆ,ಕಾಂಗ್ರೆಸ್ ಆಡಳಿತದ ರಾಜೀವ್ ಗಾಂಧಿ ಚೀನಾ ಜೊತೆ ಹಲವು ಒಪ್ಪಂದ ಮಾಡಿಕೊಂಡಿದ್ದರು.ಇವತ್ತು ಮೋದಿ ಸರ್ಕಾರ ಮಾಡಿದ ಬಿಲ್ ಗಳ ಬಗ್ಗೆಯೂ ಅವಹೇಳನ ಮಾಡುತ್ತಾರೆ,ಸ್ವಾಮಿನಾಥನ್ ವರದಿ ಬಗ್ಗೆಯೂ ಮತನಾಡಿದ್ದು, ಇದೆಲ್ಲವೂ ಜನರು ನೋಡುತ್ತಿದ್ದಾರೆ ಹೀಗಾಗಿ ಬಿಜೆಪಿ ವಿಪ ಅಭ್ಯರ್ಥಿ ವಿ ಎಸ್ ಸಂಕನೂರು ಗೆಲ್ಲುತ್ತಾರೆ

ವಿಧಾನ ಪರಿಷತ್ ಮತ್ತು ವಿಧಾನ ಸಭೆಯ ಎರಡು ಉಪ ಚುನಾವಣೆಯಲ್ಲಿ ಜನರು ಬಿಜೆಪಿ ಬೆಂಬಲ ನೀಡುತ್ತಾರೆ ಜನಾಭಿಪ್ರಾಯದ ವಿರುದ್ಧವೂ ಮಾತಾಡುವ ಪ್ರವೃತ್ತಿಯನ್ನು ಕಾಂಗ್ರೆಸ್ ಮಾಡುತ್ತದೆ, ಅದಕ್ಕೆ ನಮ್ಮ ಆಕ್ರೋಶವಿದೆ ಎಂದು ಅವರು ಹೇಳಿದರು.

Edited By : Nagesh Gaonkar
Kshetra Samachara

Kshetra Samachara

26/10/2020 01:58 pm

Cinque Terre

41.2 K

Cinque Terre

17

ಸಂಬಂಧಿತ ಸುದ್ದಿ