ಹುಬ್ಬಳ್ಳಿ:ರಾಜ್ಯದಲ್ಲಿ ಪದವೀಧರರು ಸಾಕಷ್ಟು ಸಮಸ್ಯೆಗಳನ್ನು ಹೊತ್ತು ಜೀವನ ನಡೆಸುತ್ತಿದ್ದಾರೆ. ಪದವೀಧರರ ಸರ್ವಾಂಗೀಣ ಅಭಿವೃದ್ಧಿಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಎಂದು ಕರ್ನಾಟಕ ಶಿವಸೇನಾದ ಅಭ್ಯರ್ಥಿ ಸೋಮಶೇಖರ್ ಉಮರಾಣಿ ಮನವಿ ಮಾಡಿದ್ದಾರೆ.
ಹಾವೇರಿ, ಧಾರವಾಡ, ಗದಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿರುವ ಉಮರಾಣಿ ಅವರು,ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ.ಎಲ್ಲೆಡೆಯೂ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು,ಗೆಲುವಿನ ವಿಶ್ವಾಸವನ್ನು ಸೋಮಶೇಖರ್ ಉಮರಾಣಿ ಅವರು ತೋರುತ್ತಿದ್ದಾರೆ.
ಪ್ರಸ್ತುತ ದಿನಮಾನಗಳಲ್ಲಿ ಪದವೀಧರರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.ಅಲ್ಲದೇ ಅದೆಷ್ಟೋ ಜನರು ಇಂದಿಗೂ ಕೂಡ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗದೇ ಸಂಕಷ್ಟದ ಸ್ಥಿತಿಯಲ್ಲಿ ಬದುಕನ್ನು ಮುನ್ನಡೆಸುತ್ತಿದ್ದಾರೆ ಇಂತಹ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಯುವ ಸಮುದಾಯದ ಏಳಿಗೆಗೆ ಶಿವಸೇನಾ ಪಕ್ಷಕ್ಕೆ ಒಂದು ಮತ ನೀಡಿ. ಒಂದು ನಿಮ್ಮ ಮತ ಪದವೀಧರ ಕ್ಷೇತ್ರಕ್ಕೆ ಮಾತ್ರವಲ್ಲದೇ ರಾಜ್ಯಕ್ಕೆ ಹಿತ ಎಂದು ಮನವಿ ಮಾಡಿದ್ದಾರೆ.
ಇಂದಿಗೂ ಕೂಡ ಅದೆಷ್ಟೋ ಪದವೀಧರರಲ್ಲಿ ಮಾಹಿತಿ ಕೊರತೆಯಿದೆ.ಇಂತಹ ಪದವೀಧರ ಪ್ರತಿಭೆಗಳನ್ನು ಯುವಸಮುದಾಯಕ್ಕೆ ಸೂಕ್ತ ಮಾಹಿತಿ ತಂತ್ರಜ್ಞಾನ ಹಾಗೂ ಉದ್ಯೋಗ ಸೃಷ್ಟಿಯಂತಹ ಹಲವಾರು ಕನಸನ್ನು ಶಿವಸೇನಾ ಹೊಂದಿದೆ ಎಂದು ವಿಭಿನ್ನ ರೀತಿಯಲ್ಲಿ ಮನವಿ ಮಾಡಿದರು.
Kshetra Samachara
24/10/2020 02:46 pm