ಧಾರವಾಡ : ಅ.28 ರಂದು ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಅಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಧಾರವಾಡ ವಲಯ ಕಚೇರಿ -2 ರ ಮಾರುಕಟ್ಟೆ ಪ್ರದೇಶದ ಪ್ರತಿದಿನದ ಸಂತೆ ಹುಬ್ಬಳ್ಳಿ ವಲಯ ಕಚೇರಿ-5 ರ ಲಿಂಗರಾಜನಗರ, ವಿಶ್ವೇಶ್ವರ ನಗರ ಹಾಗೂ ಉಣಕಲ್ ಸಂತೆ ಮತ್ತು ವಲಯ ಕಚೇರಿ-7 ರ ಅಪೂರ್ವ ನಗರದ ಸಿಲ್ವರ್ ಟೌ ನ್ ವಾರದ ಸಂತೆ, ಬಾಫನಾ ಲೇಔಟ್ ನ ವಾರದ ಸಂತೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಆದೇಶ ಹೊರಡಿಸಿದ್ದಾರೆ.
ಮುಕ್ತ ಮತ್ತು ಶಾಂತಿಯುತ ಚುನಾವಣಾ ಆಯೋಜನೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
Kshetra Samachara
21/10/2020 03:26 pm