ಧಾರವಾಡ: ಕಾಂಗ್ರೆಸ್ ನವರ ಕೋಟಾ ಮುಗಿದಿದೆ. ಇನ್ನೇನಿದ್ದರೂ ಆ ಪಕ್ಷ ಪಾಕಿಸ್ತಾನದಲ್ಲಿ ಗೆಲ್ಲಬೇಕಷ್ಟೇ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಲೇವಡಿ ಮಾಡಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಮತ್ತೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ತಮ್ಮ ತವರು ಜಿಲ್ಲೆಗಳಲ್ಲೇ ತಮ್ಮ ಪಕ್ಷವನ್ನು ಅವರಿಗೆ ಗೆಲ್ಲಿಸಲು ಆಗಲಿಲ್ಲ.
ತಮ್ಮದೇ ಪಕ್ಷದ ದಲಿತ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ರಕ್ಷಣೆ ಕೊಡುವ ಕೆಲಸವನ್ನು ಈ ಕಾಂಗ್ರೆಸ್ ಮಾಡಲಿಲ್ಲ. ಇಂತಹ ಪಕ್ಷಕ್ಕೆ ಜನ ಏಕೆ ಮತ ಹಾಕಬೇಕು? ಸಮಾಜವನ್ನು ಮತ್ತೆ ಒಡೆಯುವುದಕ್ಕಾಗಿ ಕಾಂಗ್ರೆಸ್ ಗೆ ಮತ ಹಾಕಬೇಕೇ? ಎಂದು ಪ್ರಶ್ನಿಸಿದ ಅವರು, ಎರಡೂವರೆ ವರ್ಷ ಬಿಜೆಪಿ ಸ್ವಚ್ಛ ಆಡಳಿತ ನಡೆಸಲಿದೆ. ಮುಂದೆಯೂ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.
Kshetra Samachara
20/10/2020 09:44 pm