ಕಲಘಟಗಿ: ಪದವೀಧರರಿಗೆ ಉದ್ಯೋಗ ಪಡೆಯುವವರೆಗೆ ಮಾಸಿಕ ಗೌರವಧನ ಹಾಗೂ ನಿರುದ್ಯೋಗ ಭತ್ಯೆ ನೀಡುವಂತೆ ಹಾಗೂ ಪದವೀಧರರಿಗೆ ಸ್ಥಳೀಯವಾಗಿ ಖಾಯಂ ಉದ್ಯೋಗ ಸೃಷ್ಟಿಸಲು ಸರಕಾರವನ್ನು ಒತ್ತಾಯಿಸುವುದಾಗಿ ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಭರವಸೆ ನೀಡಿದರು.
ಕಲಘಟಗಿ ಪಟ್ಟಣದ ವಿವಿಧ ಕಡೆಗಳಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ ನಂತರ ಮಾತನಾಡಿದರು. ಪ್ರಚಾರದ ವೇಳೆ ಪದವೀಧರ ಮತದಾರರು ಉತ್ತಮವಾಗಿ ಬೆಂಬಲ ಸೂಚಿಸಿದ್ದು, ತಮ್ಮ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ವಿನಾಯಕ ಗುಡ್ಡದಕೇರಿ,ಸಾತಪ್ಪ ಕುಂಕೂರ,ಯಲ್ಲಪ್ಪ ಮೇಲಿನಮನಿ,ಬಸವರಾಜ ಮಾದರ, ಮಂಜುನಾಥ ಮಾದರ ಉಪಸ್ಥಿತರಿದ್ದರು.
Kshetra Samachara
20/10/2020 05:31 pm