ಧಾರವಾಡ: ಪ್ರಸ್ತುತ ಪದವೀಧರರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಆ ಸಮಸ್ಯೆಗಳ ನಿವಾರಣೆಗೆ ಶ್ರಮಿಸುವುದಾಗಿ ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಭರವಸೆ ನೀಡಿದರು.
ಗದಗ ಜಿಲ್ಲೆಯ ನರೇಗಲ್ಲ ಪಟ್ಟಣದ ವಿವಿಧ ಬಡಾವಣೆಗೆಳಲ್ಲಿ ಮನೆ ಮನೆಗೆ ತೆರಳಿ ಅವರು ಪ್ರಚಾರ ನಡೆಸಿದ, ಬಳಿಕ ಶ್ರೀ ಅನ್ನದಾನೇಶ್ವರ ಮಹಾವಿದ್ಯಾಲಯದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಸದ್ಯ ಉದ್ಯೋಗದಲ್ಲಿರುವ ಮತ್ತು ಉದ್ಯೋಗ ಇಲ್ಲದ ಅಪಾರ ಪ್ರಮಾಣದ ಪದವೀಧರರು ಸರ್ಕಾರದ ನಿರ್ಲಕ್ಷ್ಯದಿಂದ ತೊಂದರೆ ಅನುಭವಿಸುತ್ತಿದ್ದಾರೆ. ಚುನಾವಣೆಯಲ್ಲಿ ನಾನು ಗೆದ್ದು ಬಂದಿದ್ದೇ ಆದಲ್ಲಿ ಸಮಸ್ಯೆಗಳ ನಿವಾರಣೆಗೆ ನಿರಂತರ ಶ್ರಮಿಸುವೆ. ಪ್ರಮುಖವಾಗಿ ನಿರುದ್ಯೋಗಿ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡುವಂತೆ ಸರ್ಕಾರದ ಮೇಲೆ ಒತ್ತಡ ತರುವ ಮೂಲಕ ಪದವೀಧರರ ಸೇವೆ ಮಾಡುವುದಾಗಿ ಗುರಿಕಾರ ಭರವಸೆ ನೀಡಿದರು.
ವಕೀಲ ಎ.ಕೆ.ಮುಧೋಳ, ಶಿವಾನಂದ ಮೂಲಿಮನಿ, ರಾಜು ರಾಠೋಡ ಸೇರಿದಂತೆ ಅನೇಕರು ಗುರಿಕಾರ ಅವರ ಜೊತೆಯಲ್ಲಿದ್ದರು.
ದಾಂಡೇಲಿ ಮತ್ತು ಹಳಿಯಾಳದಲ್ಲಿ ಬಸವರಾಜ ಗುರಿಕಾರ ಅವರ ಪರವಾಗಿ ಪದವೀಧರ ಯುವಕರ ತಂಡವು ಪ್ರಚಾರ ಕಾರ್ಯ ಮಾಡಿತು.
ಕಲಘಟಗಿಯ ಗುಡ್ ನ್ಯೂಸ್ ಪದವಿ ಮಹಾವಿದ್ಯಾಲಯ, ಪಿಯು ಕಲಾ ಹಾಗೂ ವಾಣಿಜ್ಯ ವಿದ್ಯಾಲಯ ಮತ್ತು ದಾಸ್ತಿಕೊಪ್ಪ ಸರ್ಕಾರಿ ಪಿಯು ಕಲಾ ಹಾಗೂ ವಾಣಿಜ್ಯ ಕಾಲೇಜು ಹಾಗೂ ಸೈನ್ಸ್ ವಿಭಾಗದಲ್ಲಿ ವಿನಾಯಕ ಗುಡ್ಡದಕೇರಿ ಅವರ ತಂಡವು ಪ್ರಚಾರ ಕಾರ್ಯ ಮಾಡಿತು.
ಯಾದವಾಡ, ಲೋಕೂರು, ಅದರಗುಂಚಿ, ಅಮ್ಮಿನಭಾವಿ ಯಲ್ಲಿ ಎಸ್.ಡಿ.ಎಮ್.ಸಿ ಯ ಪದಾಧಿಕಾರಿಗಳು ಬಸವರಾಜ ಗುರಿಕಾರ ಅವರ ಪರವಾಗಿ ಪ್ರಚಾರ ಮಾಡಿದರು.
ಹಾವೇರಿ ಜಿಲ್ಲೆಯಲ್ಲಿ ನಯನಾ, ಮಲ್ಲಿಕಾರ್ಜುನ, ಚಂದ್ರು ಪೋಟೇರ ಶಂಕರ ಸಾವೂರ, ವೇಣುಗೋಪಾಲ ಬಸವರಾಜ ಗುರಿಕಾರ ಅವರ ಪರವಾಗಿ ಪ್ರಚಾರ ಮಾಡಿದರು.
ಧಾರವಾಡದಲ್ಲಿ ಶಂಕರ ಉಪ್ಪಿನ, ರಾಧಿಕಾ ಕೆಂಗಾರ, ರಾಘು ಕಠಾರೆ ಇವರ ತಂಡವು ಪ್ರಚಾರ ಮಾಡಿದರೆ, ಹೆಬ್ಬಾಳ, ತಿರ್ಲಾಪುರದಲ್ಲಿ ಗಿರೀಶ ಬಗರಿ, ತಿಪ್ಪಣ್ಣ ಇವರ ತಂಡವು ಪ್ರಚಾರ ಕಾರ್ಯವನ್ನು ಮಾಡಿತು.
ಕುಂದಗೋಳ ತಾಲೂಕಿನಲ್ಲಿ ನಾಗರಾಜ ಉಣಕಲ್, ರಾಘು ನರಗುಂದ ಪ್ರವೀಣ ಇವರ ತಂಡವು ಪ್ರಚಾರ ಮಾಡಿದರೆ, ಕಾರವಾರ ನಗರದಲ್ಲಿ ಗುರಿಕಾರ ಪರವಾಗಿ ಪದವೀಧರರ ತಂಡವು ಪ್ರಚಾರ ಮಾಡಿತು.
Kshetra Samachara
19/10/2020 07:55 pm