ಕುಂದಗೋಳ : ತಾಲೂಕಿನ ಕಮಡೊಳ್ಳಿ ಗ್ರಾಮದ ಶ್ರೀ ರಾಜಬೀ ದರ್ಗಾದ ರಸ್ತೆ ಸಂಪೂರ್ಣ ಹಾಳಾಗಿದ್ದು ರಸ್ತೆಯುದ್ದಕ್ಕೂ ತಗ್ಗು, ಗುಂಡಿ ಬಿದ್ದಿದ್ದು ಸಾರ್ವಜನಿಕರ ಸಂಚಾರ ಹಾಗೂ ಶವಯಾತ್ರೆ ಮಾಡಲು ಎಲ್ಲಿಲ್ಲದ ಕಷ್ಟ ಪಡಬೆಕಾದ ಅನಿವಾರ್ಯತೆ ತಲೆದೋರಿದ್ದು ರಸ್ತೆ ದುರಸ್ತಿಗಾಗಿ ಕಮಡೊಳ್ಳಿ ಗ್ರಾಮಸ್ಥರು ಪಿಡಿಓ ವಿರುದ್ಧ ಘೋಷಣೆ ಕೂಗಿದರು.
ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ಆಡಳಿತಾಧಿಕಾರಿಗಳು ಪಂಚಾಯಿತಿಯಲ್ಲಿ ಬಾಕಿ ಉಳಿದಿರುವ 15 ಹಣಕಾಸನ್ನ ಬಿಡುಗಡೆ ಮಾಡಿ ಶೀಘ್ರವಾಗಿ ಶ್ರೀ ರಾಜಬೀ ರಸ್ತೆ ಅಭಿವೃದ್ಧಿ ಪಡಿಸುವಂತೆ ಗ್ರಾಮಸ್ಥರು ಒಂದು ತಾಸಿಗೂ ಅಧಿಕ ಕಾಲ ಪ್ರತಿಭಟನೆ ನಡೆಸಿ ನವೆಂಬರ್ 14 ಒಳಗಾಗಿ ರಸ್ತೆ ಕಾಮಗಾರಿ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.
Kshetra Samachara
15/10/2020 05:10 pm