ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕವಿವಿಯಲ್ಲಿ ಕನ್ನಡದ ಉಳಿವಿಗಾಗಿ ಹೋರಾಟ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ಉಳಿವಿಗಾಗಿ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಕನ್ನಡ ಅಧ್ಯಾಪಕರ ಪರಿಷತ್ತು ವತಿಯಿಂದ ಕುಲಪತಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಕರ್ನಾಟಕ ವಿಶ್ವವಿದ್ಯಾಲಯದ ಡಾ.ಆರ್.ಸಿ ಹಿರೇಮಠ ಕನ್ನಡ ಅಧ್ಯಯನ ಪೀಠದಿಂದ ಶಾಂತಿಯುತ ಮೆರವಣಿಗೆ ಮೂಲಕ ಆಗಮಿಸಿದ ಅಧ್ಯಾಪಕರು ಕವಿವಿ ಕುಲಪತಿ ಕಚೇರಿ ಎದುರು ಕೆಲವೊತ್ತು ಪ್ರತಿಭಟಿಸಿದರು.

ವಿಶ್ವವಿದ್ಯಾಲಯಗಳಲ್ಲಿ ಸಿಬಿಸಿಎಸ್ ಪದ್ಧತಿ ಅಳವಡಿಕೆಯಿಂದ ಕನ್ನಡ ಬೋಧನೆಗೆ ಬಹುದೊಡ್ಡ ಆತಂಕಗಳು ಎದುರಾಗಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯ ಕನ್ನಡ ಅಧ್ಯಾಪಕರ ಪರಿಷತ್ತು ಹಿಂದಿನಂತೆ ಕನ್ನಡವನ್ನು ಕಡ್ಡಾಯವಾಗಿ ಬೋಧಿಸಲು, ಕನ್ನಡ ಆವಶ್ಯಕ ವಿಷಯದ ಕಾರ್ಯಭಾರವನ್ನು ಮೊದಲಿನಂತೆ 5 ಗಂಟೆಗಳಿಗೆ ಹೆಚ್ಚಿಸಲು, ಬಿಸಿಎ ಬಿಬಿಎ 3 ಮತ್ತು 4ನೇ ಸೆಮಿಸ್ಟರ್ ಗೆ ಕನ್ನಡವನ್ನು ರದ್ದುಗೊಳಿಸಿದ್ದನ್ನು ಪುನರರಾಂಭಿಸಬೇಕು ಎಂದು ಆಗ್ರಹಿಸಿದರು.

Edited By :
Kshetra Samachara

Kshetra Samachara

12/10/2020 09:19 pm

Cinque Terre

13.67 K

Cinque Terre

1

ಸಂಬಂಧಿತ ಸುದ್ದಿ