ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕಮೀಷನರ್-ಡಿಸಿಪಿ ಶೀತಲ ಸಮರ: ಸಮಸ್ಯೆ ಇದೆ ಎಂದ ಶೆಟ್ಟರ್

ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಹಾಗೂ ಡಿಸಿಪಿ ನಡುವೆ ಉಂಟಾಗಿರುವ ಶೀತಲ ಸಮರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಚಿವ ಜಗದೀಶ ಶೆಟ್ಟರ್, ಕೆಲವೊಂದಿಷ್ಟು ಸಮಸ್ಯೆಗಳಿವೆ. ಅವುಗಳನ್ನು ಈಗಾಗಲೇ ಗೃಹ ಸಚಿವರ ಗಮನಕ್ಕೆ ತರಲಾಗಿದೆ. ಅವರು ಅದನ್ನು ಬಗೆಹರಿಸುವುದಾಗಿ ತಿಳಿಸಿದ್ದಾರೆ ಎಂದರು.

ಇನ್ನು ಮಹಾದಾಯಿ ಕುರಿತು ಮಾತನಾಡಿದ ಅವರು, ಈ ಸಮಸ್ಯೆ ಮುಗಿದು ಹೋದ ಅಧ್ಯಾಯ, ಈಗಾಗಲೇ ಈ ಸಂಬಂಧ ನಮ್ಮ ಪರವಾಗಿಯೇ ಅವಾರ್ಡ್ ಆಗಿದೆ. ಕೇವಲ ಪರಿಸರ ಇಲಾಖೆ ಮತ್ತು ಅರಣ್ಯ ಇಲಾಖೆಯ ಸಮ್ಮತಿ ಬೇಕಾಗಿದೆ ಎಂದರು.

Edited By :
Kshetra Samachara

Kshetra Samachara

08/10/2020 07:02 pm

Cinque Terre

20.81 K

Cinque Terre

0

ಸಂಬಂಧಿತ ಸುದ್ದಿ