ಅಣ್ಣಿಗೇರಿ: ಪರಿಶಿಷ್ಟ ಜಾತಿ/ಪರಿಶಿಷ್ಠ ಪಂಗಡಗಳ ದಲಿತ ಮಹಾಒಕ್ಕೂಟ ಅಣ್ಣಿಗೇರಿ ಹಾಗೂ ಕರ್ನಾಟಕ ದಲಿತ ವಿಮೋಚನಾ ಸಮಿತಿ ಅಣ್ಣಿಗೇರಿ ತಾಲೂಕು ಘಟಕ ವತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಪುರಸಭೆಯ ಆವರಣದಲ್ಲಿ ಮಾಡಲಾಯಿತು.
ಪುರಸಭೆ ಆವರಣದಲ್ಲಿರುವ ಡಾಕ್ಟರ್ ಬಿ ಆರ್ ಅಂಬೇಡ್ಕರ ಅವರ ಭಾವಚಿತ್ರದ ಮುಂಭಾಗದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ಅಂಗವಾಗಿ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಕ್ತಿಯ ನಮನ ಸಲ್ಲಿಸಿ ಡಾ ಬಿ ಆರ್ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷರಾದ ಷಣ್ಮುಖಣ್ಣ ಗುರಿಕಾರ್, ಬಸವರಾಜ್ ಯಳವತ್ತಿ,ರಾಜು ವೇರಣೆಕರ,ಯಲ್ಲಪ್ಪ ದುಂದೂರ್, ಪುರಸಭೆ ಸದಸ್ಯರಗಳಾದ S k ಹಿರೇಮಠ, ಈಶ್ವರ್ ಕಾಳಪ್ಪ ನವರ್, ಶಿವಾನಂದ ಬೆಳಹಾರ್, ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ದಲಿತ ಮಹಾ ಒಕ್ಕೂಟದ ಅಧ್ಯಕ್ಷರಾದ ಶ್ರೀ ಮಾರುತಿ ಮರಡ್ಡಿ, ಉಪಾಧ್ಯಕ್ಷಗಳಾದ ಧರ್ಮರಾಜ್ ಹರಣಶಿಕಾರಿ, ಸತ್ಯಪ್ಪ ದೊಡ್ಡಮನಿ, ಜಟ್ಟಪ್ಪ ಮುತ್ತಲಗಿರಿ, ಮಾರುತಿ ಅಬ್ಬಿಗೇರಿ, ಹನುಮಂತ್ ರಾಜ್ ಉಣಕಲ್, ಸಾತು ಭೋವಿ,ಚೆನ್ನಪ್ಪ ಮನ್ನಪ್ಪನವರ್, ಯಲ್ಲಪ್ಪ ಉಣಕಲ್ ಉಪಸ್ಥಿತರಿದ್ದರು.
Kshetra Samachara
09/10/2022 09:26 pm