ಅಣ್ಣಿಗೇರಿ: ತಾಲೂಕಿನ ಭದ್ರಾಪುರ ಗ್ರಾಮದ ಗಜಾನನ ಯುವಕ ಮಂಡಳದ ಪದಾಧಿಕಾರಿಗಳು ಸೇರಿದಂತೆ ಸರ್ವ ಸದಸ್ಯರು ಇಂದು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮತ್ತು ಅಧ್ಯಕ್ಷರಿಗೆ, ಸರ್ವ ಸದಸ್ಯರಿಗೆ ಯುವಕ ಮಂಡಲಕ್ಕೆ ಜಾಗ ನೀಡುವಂತೆಯೂ ಮನವಿ ಪತ್ರ ಸಲ್ಲಿಸಿದರು.
ಯುವಕ ಮಂಡಲ ಬಹಳ ವರ್ಷಗಳಿಂದ ನೋಂದಣಿಯಾಗಿದ್ದು,ಆದರೆ ಯಾವುದೇ ತರಹದ ಕಟ್ಟಡ ಕಟ್ಟಿಸಿಕೊಳ್ಳಲು ಜಾಗ ಇಲ್ಲದೆ ಇರುವುದರಿಂದ ಜನಪರ ಕಾರ್ಯಕ್ರಮಗಳನ್ನು ಹಾಗೂ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲು ಸ್ಥಳದ ಅಡಚನೆ ಇರುತ್ತದೆ ಎಂದು ಯುವಕ ಮಂಡಲದ ಸದಸ್ಯರಾದ ಪರಪ್ಪ ತಡಹಾಳ ಅವರು ತಿಳಿಸಿದರು.
Kshetra Samachara
23/09/2022 03:07 pm