ಧಾರವಾಡ: ಧಾರವಾಡದಲ್ಲಿ ನಡೆಯುತ್ತಿರುವ ಕೃಷಿ ಮೇಳದ ಮೊದಲ ದಿನ ಪ್ರಮುಖ ಆಕರ್ಷಣೀಯ ಕೇಂದ್ರವಾಗಿದ್ದು, ಜಾನುವಾರು ಪ್ರದರ್ಶನ ಹಾಗೂ ಶ್ವಾನಗಳ ಪ್ರದರ್ಶನ.
ಎರಡು ವರ್ಷಗಳ ಬಳಿಕ ಮತ್ತೆ ಅದ್ಧೂರಿಯಿಂದ ನಡೆಯುತ್ತಿರುವ ಕೃಷಿ ಮೇಳಕ್ಕೆ ಉತ್ತಮ ಜನಸ್ಪಂದನೆ ದೊರೆತಿದ್ದು, ಮೊದಲ ದಿನ ವಿವಧ ಜಾತಿಯ ಶ್ವಾನ, ಕುರಿ, ಮೇಕೆಗಳನ್ನು ನೋಡಲು ಜನರು ಮುಗಿಬಿದ್ದಿದ್ದರು.
ಕೃಷಿ ವಿಶ್ವವಿದ್ಯಾಲಯದ ಮುಖ್ಯ ವೇದಿಕೆ ಎಡಭಾಗದಲ್ಲಿ ಈ ಜಾನುವಾರು ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಮೇಕೆ, ಆಡಿಗಿಂತಲೂ ಹೆಚ್ಚಾಗಿ ಪ್ರಸಕ್ತ ವರ್ಷ ವಿವಿಧ ಜಾತಿಯ ಶ್ವಾನಗಳನ್ನೇ ಹಚ್ಚಿಗೆ ಪ್ರದರ್ಶನಕ್ಕೆಂದು ತರಲಾಗಿದೆ.
ಮುಧೋಳ ನಾಯಿ, ಜರ್ಮನ್ ಶಫರ್ಡ್, ಪಗ್, ಸ್ಟ್ಯಾಲಿನ್, ಡಾಲ್ಮಾಟೆನ್, ಲಾಸಾ ಅಪ್ಸೊ, ಫಾಕ್ಸ್ ಟೆರಿಯರ್, ನೈಜೆರಿಯನ್ ಹಸ್ಕಿ, ಡ್ಯಾಕ್ ಶುಂಡ್ ಸೇರಿದಂತೆ ವಿವಿಧ ಜಾತಿಯ ಶ್ವಾನಗಳನ್ನು ಪ್ರದರ್ಶನಕ್ಕೆ ತರಲಾಗಿತ್ತು.
ಈ ಶ್ವಾನಗಳನ್ನು ನೋಡಲು ಸಾರ್ವಜನಿಕರು ಮುಗಿಬಿದ್ದಿದ್ದರು. ಕಾರ್ಯಕ್ರಮದ ಮುಖ್ಯ ವೇದಿಕೆಯ ಸುತ್ತ ಮುತ್ತ ಹಾಕಲಾಗಿರುವ ಅನೇಕ ಸ್ಟಾಲ್‌ಗಳಲ್ಲಿ ಕೃಷಿ ಯಂತ್ರೋಪಕರಣಗಳನ್ನು ಪ್ರದರ್ಶನಕ್ಕೆ ಹಾಗೂ ಮಾರಾಟಕ್ಕೆ ಇಡಲಾಗಿದೆ. ಶ್ವಾನಗಳ ಬಳಿ ಬಂದ ಮಕ್ಕಳು ಹಾಗೂ ಸಾರ್ವಜನಿಕರು ಸೆಲ್ಪಿ ತೆಗೆದುಕೊಂಡು ಖುಷಿಪಟ್ಟರು.
Kshetra Samachara
18/09/2022 07:20 pm