ಅಣ್ಣಿಗೇರಿ: ತಾಲೂಕಿನ ಗ್ರಾಮಗಳಾದ ಹಳ್ಳಿಕೇರಿ ಮತ್ತು ಬಸಾಪುರ ಗ್ರಾಮದ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದವರಿಗೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅವರು ಐದು ಲಕ್ಷ ರೂಪಾಯಿ ಚಕ್ ವಿತರಣೆ ಮಾಡಿದರು.
ಚಕ್ ವಿತರಣೆ ಮಾಡಿ ಮಾತನಾಡಿದ ಸಚಿವರು ರೈತರು ದೇಶದ ಬೆನ್ನೆಲುಬು ಅವರ ಕ್ಷೇಮಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಬದ್ಧವಾಗಿದೆ ರೈತರು ಆತ್ಮಹತ್ಯೆ ಅಂತ ಯೋಚನೆಗಳನ್ನು ಬಿಟ್ಟು ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಬೇಕೆಂದು ಮಾತನಾಡಿದರು.
ಈ ವೇಳೆ ತಾಲೂಕು ದಂಡಾಧಿಕಾರಿ ಮಂಜುನಾಥ್ ಅಮಾಸೆ, ಎಸ್ ಬಿ ದಾನಪ್ಪಗೌಡರ್, ತಾಲೂಕು ಆಡಳಿತದ ವರ್ಗದ ಸಿಬ್ಬಂದಿಗಳು ಉಪಸ್ಥಿತರಿದ್ದರು.
Kshetra Samachara
30/06/2022 02:18 pm