ಅಣ್ಣಿಗೇರಿ: ತಾಲೂಕಿನ ಸೈದಾಪುರ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣಾಭಿವೃದ್ಧಿ ಹಾಗೂ ಸ್ವಯಂ ಸೇವಾ ಸಮಿತಿ ಉದ್ಘಾಟನೆ ಕಾರ್ಯಕ್ರಮ ಜರುಗಿತು. ಹಾಗೂ 2021- 22 ನೇ ಸಾಲಿನ ಎಸ್.ಎಸ್. ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.ಇದೇ ವೇಳೆ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ವಿತರಣೆ ಮಾಡಲಾಯಿತು.
ಈ ವೇಳೆ ಎಸ್ ಬಿ ದಾನಪ್ಪಗೌಡ್ರು, ಫಕ್ಕೀರವ್ವ ತಸಿಲ್ದಾರ್,ದೇವರಾಜ್ ದಾಂಡಿಬಾವಿ,ಯಲ್ಲಪ್ಪ ದುಂದೂರ, ವಿಶ್ವನಾಥ ಸ್ವಾಮಿ ಹಿರೇಮಠ ಸೇರಿದಂತೆ ಗ್ರಾಮದ ಗಣ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
24/06/2022 05:21 pm