ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ವಂದನೆ ಅಭಿನಂದನೆ ಸಮಾರಂಭ

ಅಣ್ಣಿಗೇರಿ: ಪಟ್ಟಣದಲ್ಲಿ ಸೇವಾ ನಿವೃತ್ತರಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ಬಿ.ಆರ್.ದಿವಟರ ಸೇವಾ ನಿವೃತ್ತ ಹಿನ್ನೆಲೆ ವಂದನೆ ಅಭಿನಂದನೆ ಕಾರ್ಯಕ್ರಮ ಶ್ರೀ ತೋಂಟದಾರ್ಯ ಮಠದಲ್ಲಿ ಜರುಗಿತು.

ಕಾರ್ಯಕ್ರಮವನ್ನು ಹಿಂದುಸ್ತಾನಿ ಗಾಯಕರಾದ ಪಂಡಿತ ಹರೀಶ್ ಕುಲಕರ್ಣಿಯವರು ತಮ್ಮ ಸಂಗೀತ ಕಾರ್ಯಕ್ರಮವನ್ನು ನೀಡುವುದರ ಮುಖಾಂತರ ಕಾರ್ಯಕ್ರಮವನ್ನು ಚಾಲನೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ.ಎಸ್.ಎಸ್ ಹರ್ಲಾಪುರ ಗುರುಗಳು ವಹಿಸಿ ಬಿ.ಆರ್. ದಿವಟರ ಅವರ ಬಗ್ಗೆ ಮಾತನಾಡಿ ದೇವರು ಅವರಿಗೆ ಆಯುಷ್ಯ ಆರೋಗ್ಯ ಸಕಲ ಸಂಪತ್ತು ಗಳನ್ನು ಕೊಟ್ಟು ಕಾಪಾಡಲಿ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾದ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ವ್ಹಿ.ಎಂ.ಹಿರೇಮಠ ಅವರು ಮಾತನಾಡಿ ದಿವಟರ್ ಗುರುಗಳು ಹಲವಾರು ವರ್ಷಗಳಿಂದ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಅವರ ಮಾರ್ಗದರ್ಶನ ನಮಗೆಲ್ಲರಿಗೂ ಅವಶ್ಯವಾಗಿರುತ್ತದೆ. ಅವರ ಉತ್ತಮ ನಡವಳಿಕೆ ನಮಗೆ ಸ್ಪೂರ್ತಿದಾಯಕ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.

ಇನ್ನೂ ನಿವೃತ್ತಿ ಹೊಂದಿದ ಬಿ.ಆರ್.ದಿವಟರ ಗುರುಗಳು ಮಾತನಾಡಿ ಇಷ್ಟು ದಿನ ನನಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿ. ನಿಮ್ಮೆಲ್ಲರ ಪ್ರೀತಿ ನೋಡಿ ನನಗೆ ಕಣ್ತುಂಬಿ ಬರುತ್ತಿದೆ. ಏನು ಹೇಳಬೇಕು ಗೊತ್ತಾಗುತ್ತಿಲ್ಲ. ನನ್ನ ವೃತ್ತಿ ಜೀವನದಲ್ಲಿ ನಾನು ಹಣ ಸಂಪಾದಿಸಿಲ್ಲ ಪ್ರೀತಿ ಸಂಪಾದಿಸಿದ್ದೇನೆ ಅದಕ್ಕೆ ಸಾಕ್ಷಿ ನೀವೆಲ್ಲರೂ ತೋರಿಸುತ್ತಿರುವ ಈ ಗೌರವ ಎಂದು ಮಾತನಾಡಿದರು.

ಈ ವೇಳೆ ಕುಟುಂಬ ವರ್ಗ, ಶಿಕ್ಷಕರು, ಪಟ್ಟಣದ ಗಣ್ಯರು, ವಿದ್ಯಾರ್ಥಿ ಬಳಗದವರು ಸೇರಿ ಶಿಕ್ಷಕರಿಗೆ ಗೌರವಪೂರ್ವಕವಾಗಿ ಸನ್ಮಾನ ಮಾಡಿ ಗೌರವಿಸಿದರು.

Edited By : PublicNext Desk
Kshetra Samachara

Kshetra Samachara

06/06/2022 11:13 am

Cinque Terre

14.28 K

Cinque Terre

0

ಸಂಬಂಧಿತ ಸುದ್ದಿ