ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: "ಭಾವೈಕ್ಯತೆಯ ಸಂತ ಇಬ್ರಾಹಿಂ ಸುತಾರ": ಸಾಹಿತಿ ವೈ.ಜಿ ಭಗವತಿ

ಕಲಘಟಗಿ: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತನಿಂದ ಕಲಘಟಗಿ ತಾಲೂಕಾ ಪಂಚಾಯತ್ ಸಭಾ ಭವನದಲ್ಲಿ ಭಾವೈಕ್ಯತೆಯ ಸಂತ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಅವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.

ಸಾಹಿತಿ ವೈ.ಜಿ ಭಗವತಿ ಮಾತನಾಡಿ, ಬಹು ಧರ್ಮಗಳ ಗ್ರಂಥಗಳ ಸಾರ ತಿಳಿದುಕೊಂಡು ಪ್ರವಚನಗಳ ಮೂಲಕ ಜನಸಾಮಾನ್ಯರಲ್ಲಿ ಕೋಮುಸೌಹಾರ್ದತೆ ಮೂಡಿಸುತ್ತಿದ್ದ ಭಾವೈಕ್ಯತೆಯ ಸಂತ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಅವರ ನಿಧನ ನಾಡಿಗೆ ತುಂಬಲಾರದ ನಷ್ಟ ಎಂದರು.

ಹಿರಿಯ ಸಾಹಿತಿ ಎಂ.ಎಂ. ಪುರದನಗೌಡರ ಮಾತನಾಡಿ, ಸಂತ ಶಿಶುನಾಳ ಶರೀಫರನ್ನು ಕಾಣದಿದ್ದರೂ ಅಂತಹ ಅದ್ಭುತ ಚೇತನವನ್ನು ಇಬ್ರಾಹಿಂ ಸುತಾರರಲ್ಲಿ ಕಾಣಬಹುದಿತ್ತು.ಸರ್ವಧರ್ಮದ ತಿರುಳು ಅರಿತುಕೊಂಡ ಮಹಾನದಾರ್ಶನಿಕ ಅವರಾಗಿದ್ದರು ಎಂದರು.

ಕಲಘಟಗಿ ಕಸಾಪ ತಾಲೂಕಾ ಅಧ್ಯಕ್ಷ ಮಲ್ಲಿಕಾರ್ಜುನ ಪುರದನಗೌಡರ ಮಾತನಾಡಿ,ಭಾವೈಕ್ಯತೆಯ ಸಾರವನ್ನು ಸಮಾಜದಲ್ಲಿ ಉಣಬಡಿಸಿ, ಸಮಾನತೆಯನ್ನು ಸಾರಿದ ಸಾಧಕರಾದ ಇಬ್ರಾಹಿಂ ಸುತಾರ ಅವರ ಅಗಲಿಕೆ ಕನ್ನಡ ನಾಡಿಗೆ ತುಂಬಲಾರದ ನಷ್ಟ ಎಂದರು.ಸಭೆಯಲ್ಲಿ ಇಬ್ರಾಹಿಂ ಸುತಾರ ಅವರ ನಿಧನಕ್ಕೆ ಮೌನಾಚರಣೆ ಸಲ್ಲಿಸಿ ಗೌರವಸಮರ್ಪಿಸಿತು.

ಸಭೆಯಲ್ಲಿ ಅಣ್ಣಪ್ಪ ಓಲೆಕಾರ,ಬಸವರಾಜ ದೊಡಮನಿ,ಜಿ ಬಿ ನೇಕಾರ,ವೀರಣ್ಣ ಕುಬಸದ,ತಾ.ಪಂ. ಸಹಾಯಕ ನಿದೆಶಕರಾದ ಚಂದ್ರು ಪೂಜಾರ,ರವಿಂದ್ರ ಅಲ್ಲಾಪುರ ಉಪಸ್ಥಿತರಿದ್ದರು.

ಕಲಘಟಗಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತನಿಂದ ಕಲಘಟಗಿ ತಾಲೂಕಾ ಪಂಚಾಯತ್ ಸಭಾ ಭವನದಲ್ಲಿ ಭಾವೈಕ್ಯತೆಯ ಸಂತ ಪದ್ಮಶ್ರೀ ಪುರಸ್ಕøತ ಇಬ್ರಾಹಿಂ ಸುತಾರ ಅವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.

Edited By :
Kshetra Samachara

Kshetra Samachara

05/02/2022 09:52 pm

Cinque Terre

10.86 K

Cinque Terre

0

ಸಂಬಂಧಿತ ಸುದ್ದಿ