ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹೆದ್ದಾರಿಯಲ್ಲೇ ಶ್ರದ್ಧಾಂಜಲಿ

ಧಾರವಾಡ: ಜ.15 ರಂದು ಹುಬ್ಬಳ್ಳಿ, ಧಾರವಾಡ ಬೈಪಾಸ್ ರಸ್ತೆಯ ಇಟಿಗಟ್ಟಿ ಕ್ರಾಸ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ 13 ಜನರಿಗೆ ಹೆದ್ದಾರಿಯಲ್ಲೇ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪಿ.ಎಚ್.ನೀರಲಕೇರಿ, ಶ್ರೀಶೈಲಗೌಡ ಕಮತರ, ವಿವಿಧ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.

ಈ ಅಪಘಾತದಲ್ಲಿ ಸಾವನ್ನಪ್ಪಿದ ಹೆಣ್ಣು ಮಕ್ಕಳ ಕುಟುಂಬಸ್ಥರು ಕೂಡ ಧಾರವಾಡಕ್ಕೆ ಬಂದಿದ್ದು, ಧಾರವಾಡ ಜಿಲ್ಲಾಧಿಕಾರಿ ಕಚೇರಿಯಿಂದ ಅಪಘಾತವಾದ ಸ್ಥಳದವರೆಗೂ ಪಾದಯಾತ್ರೆ ನಡೆಸಿ ಅಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.

ಈ ಬೈಪಾಸ್ ರಸ್ತೆ ಅಗಲೀಕರಣವಾಗಬೇಕು ಆರು ಲೈನ್ ರಸ್ತೆ ಇದಾಗಬೇಕು. ನಮ್ಮ ಕುಟುಂಬಕ್ಕಾದ ಅನ್ಯಾಯ ಬೇರೆ ಕುಟುಂಬಗಳಿಗೆ ಆಗುವುದು ಬೇಡ ಕೂಡಲೇ ಸರ್ಕಾರ ಈ ರಸ್ತೆ ಅಗಲೀಕರಣಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿ ಮೃತ ಹೆಣ್ಣುಮಕ್ಕಳ ಕುಟುಂಬಸ್ಥರು ದಾವಣಗೆರೆಯಿಂದ ಧಾರವಾಡಕ್ಕೆ ಬಂದು ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಸರ್ಕಾರದ ಗಮನಸೆಳೆಯುತ್ತಿದ್ದಾರೆ.

Edited By : Manjunath H D
Kshetra Samachara

Kshetra Samachara

06/02/2021 11:54 am

Cinque Terre

43.25 K

Cinque Terre

1

ಸಂಬಂಧಿತ ಸುದ್ದಿ