ಕುಂದಗೋಳ : ಮಹಿಳೆಯರು ಮತ್ತು ಪುರುಷರಿಗೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಸಮಾನ ಕೂಲಿ ನೀಡಿ ನಿಮ್ಮೂರಲ್ಲೇ ನಿಮಗೆ ಕೆಲಸ ನೀಡಿದರು, ಈ ಬಗ್ಗೆ ಮಹಿಳೆಯರು ಆಸಕ್ತಿ ತೋರುತ್ತಿಲ್ಲ. ಈ ಬಗ್ಗೆ ನೀವು ಆಸಕ್ತಿ ತೋರಿ ನಿಮ್ಮ ಕರ್ತವ್ಯವನ್ನು ನೀವು ಪಡೆದು ದಿನಕ್ಕೆ 275 ರೂಪಾಯಿ ಗರಿಷ್ಠ ಕೂಲಿ ಸಂಪಾದಿಸಿ ಎಂದು ತಾ.ಪಂ ನರೇಗಾ ಯೋಜನಾಧಿಕಾರಿ ಅಜಯ್ ಹೇಳಿದರು.
ತಾಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆದ ಮಹಿಳಾ ಕಾಯಕ ಶಕ್ತಿ ಅಭಿಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕುಂದಗೋಳ ತಾಲೂಕಿನ ಹಳ್ಳಿಗಳಲ್ಲಿ ಉದ್ಯೋಗ ಖಾತರಿ ಯೋಜನೆ ಮಹಿಳೆಯರಿಗೆ ತಲುಪುತ್ತಿಲ್ಲ, ಈ ಬಗ್ಗೆ ನಾವು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ಯೋಜನೆ ರೂಪಿಸಿಲಿದ್ದೇವೆ ಎಂದರು.
ತಾಪಂ ಅಧಿಕಾರಿ ಪ್ರಕಾಶ್ ಬಿರಾದಾರ ಮಾತನಾಡಿ ಮಹಿಳೆಯ ಎಳ್ಗೆಗಾಗಿ ಸರ್ಕಾರ ರೂಪಿಸಿದ ನಿಯಮಗಳನ್ನು ಮಹಿಳೆಯರು ಪಡೆದಾಗ ಮಾತ್ರ ನಿಮ್ಮ ಮಹಿಳಾ ಏಳ್ಗೆ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಗುಡೇನಕಟ್ಟಿ ಗ್ರಾಪಂ ಸದಸ್ಯರು ಹಾಗೂ ಪಿಡಿಓ ಬಸವರಾಜ ಕುರಣಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Kshetra Samachara
19/01/2021 05:32 pm