ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪುಣೆ-ಬೆಂಗಳೂರು ಬೈಪಾಸ್ ರಸ್ತೆ 6 ಲೈನ್ ಆಗಬೇಕಾಗಿದೆ- ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಧಾರವಾಡ ಇಟ್ಟಿಗಟ್ಟಿ ರಸ್ತೆಯಲ್ಲಿ ಇಂದು ನಡೆದ ಭೀಕರ ಅಪಘಾತ ಕೇಳಿ ತುಂಬ ಬೇಸರವಾಗಿದೆ. ಆದಷ್ಟು ಬೇಗ ಪುಣೆ- ಬೆಂಗಳೂರು ರಸ್ತೆಯನ್ನು 6 ಲೈನ್ ರಸ್ತೆಯನ್ನಾಗಿ ಮಾಡಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ತಿಳಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ 6 ಲೈನ್ ಆಗಬೇಕಾಗಿದೆ. ಅದಕ್ಕೆ ಟಿಪಿಆರ್ ಸಿದ್ಧವಾಗುತ್ತಿದೆ. ಹಣ ಕೊಡಲು ಕೇಂದ್ರ ಸರ್ಕಾರವು ಮುಂದೆ ಬಂದಿದೆ. 2024ರವರೆಗೆ ಅದು ನೈಸ್ ಸಂಸ್ಥೆಯಡಿ ಇದೆ. ನೈಸ್ ಸಂಸ್ಥೆ ಅಶೋಕ ಖೇಣಿ ಅವರಿಗೆ ಭೇಟಿ ಮಾಡಿದ್ದೇವೆ. ಅಪಘಾತಗಳು ಹೆಚ್ಚಾಗುತ್ತಿವೆ. ಹೀಗಾಗಿ ಆರು ಲೈನ್ ಮಾಡುವುದು ಅವಶ್ಯಕವಿದೆ ಎಂದು ಹೇಳಿದ್ದೆವು. ಅದಕ್ಕೆ ಅವರು ಒಪ್ಪಿಗೆ ಕೂಡ ಕೊಟ್ಟಿದ್ದರು. ಟೆಂಡರ್ ಪ್ರೋಸೆಸ್ ಮಾಡಿ, ಬೇರೆಯವರಿಗೆ ನೀಡಲಾಗುತ್ತದೆ ಎಂದರು.

ಈಗ ಅಪಘಾತ ಆಗಿದೆ, ಹಿಂದೆ ಕೂಡ ಅಪಘಾತಗಳು ಆಗಿವೆ‌. ಆರು ಲೈನ್ ಮಾಡಿದರೆ ಅಪಘಾತ ಸಂಖ್ಯೆ ಕಡಿಮೆ ಆಗುತ್ತವೆ ಎಂದು ತಿಳಿಸಿದರು.

Edited By : Manjunath H D
Kshetra Samachara

Kshetra Samachara

15/01/2021 03:20 pm

Cinque Terre

70.68 K

Cinque Terre

28

ಸಂಬಂಧಿತ ಸುದ್ದಿ