ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಇವ್ರು ಟಿಕ್ ಟಾಕ್ ನಲ್ಲಿ ಮಾತ್ರ ಸ್ಟಾರ್ ಅಲ್ಲ.. ಅಭಿವೃದ್ಧಿ ಮಾಡೋದ್ರಲ್ಲೂ ಸ್ಟಾರ್

ಪ್ರಾಯೋಜಿತ

ಧಾರವಾಡ: ಸಿದ್ದಪ್ಪ ಕುಂಬಾರ ಅಂದ್ರೆ ಅವರೊಬ್ಬ ಟಿಕ್ ಟಾಕ್ ಸ್ಟಾರ್. ಟಿಕ್ ಟಾಕ್ ಬ್ಯಾನ್ ಆದಮೇಲೂ ಅನೇಕ ಕಾಮಿಡಿ ವೀಡಿಯೋಗಳನ್ನು ಮಾಡಿ ಜನರನ್ನು ರಂಜಿಸುತ್ತಾ ಇರ್ತಾರೆ. ಇತ್ತೀಚೆಗೆ ಮಜಾ ಟಾಕೀಸ್ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದ ಇವ್ರು ಮೂಲತಃ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದವರು.

ಹೆಬ್ಬಳ್ಳಿ ಗ್ರಾಮಕ್ಕೆ ಇವ್ರು ಕಾಕಾ ಎಂದೇ ಪರಿಚಿತರು. ವೃತ್ತಿಯಿಂದ ಗಾರೆ ಮೇಸ್ತ್ರಿ ಆದ್ರೂ ಹೆಬ್ಬಳ್ಳಿ ಗ್ರಾಮದ ಮೂರನೇ ವಾರ್ಡನಿಂದ ಸ್ಪರ್ಧೆ ಮಾಡಿ ಗ್ರಾಮ ಪಂಚಾಯ್ತಿ ಸದಸ್ಯರಾಗಿದ್ದರು. ಟಿಕ್ ಟಾಕ್ ಸ್ಟಾರ್ ಮಾತ್ರವಲ್ಲದೇ ಒಬ್ಬ ಗ್ರಾಮ ಪಂಚಾಯ್ತಿ ಸದಸ್ಯನಾಗಿ ಅಭಿವೃದ್ಧಿ ಕೆಲಸಗಳನ್ನೂ ಮಾಡಿಸಿ ತಮ್ಮ ವಾರ್ಡ್ ಗೆ ಸ್ಟಾರ್ ಆಗಿದ್ದಾರೆ.

ಹೆಬ್ಬಳ್ಳಿ ಗ್ರಾಮದ ತಮ್ಮ ವಾರ್ಡಿನಲ್ಲಿ ನಿಜವಾದ ಫಲಾನುಭವಿಗಳಿಗೆ ಬಸವ ವಸತಿ, ಆಶ್ರಯ ಮನೆಗಳನ್ನು ತಲುಪಿಸುವ ಕೆಲಸ ಮಾಡಿದ್ದಾರೆ. ತಮ್ಮ ವಾರ್ಡಿನ ಅನೇಕ ಕಡೆಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವುದರ ಜೊತೆಗೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿನಯ ಕುಲಕರ್ಣಿ ಅವರ ಸಹಕಾರದಿಂದ ಮಾರಡಗಿ ಕ್ರಾಸ್ ವರೆಗೆ 1 ಕಿಲೋ ಮೀಟರ್ ರಸ್ತೆಯನ್ನು ಒಬ್ಬ ಗ್ರಾಮ ಪಂಚಾಯ್ತಿ ಸದಸ್ಯನಾಗಿ ಡಾಂಬರೀಕರಣ ಮಾಡಿಸಿದ್ದಾರೆ. ಇನ್ನು ಕುಡಿಯುವ ನೀರಿಗೆ ಸಂಬಂಧಿಸಿದಂತೆ ಅಲ್ಲಲ್ಲಿ ಟ್ಯಾಂಕ್ ಗಳನ್ನು ಹಾಕಿಸಿ ನೀರಿನ ಅನುಕೂಲ ಮಾಡಿಕೊಟ್ಟಿದ್ದಾರೆ. ಗ್ರಾಮದ ಬೀದಿಗಳಲ್ಲಿ ದೊಡ್ಡ ಬೀದಿ ದೀಪಗಳನ್ನು ಹಾಕಿಸಿದ್ದಾರೆ. ಇವರ ಅವಧಿಯಲ್ಲಿ ತಮ್ಮ ವಾರ್ಡಿನಲ್ಲಿ ಅಂದಾಜು 60 ಲಕ್ಷ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸಿದ್ದಾರಂತೆ.

ಇನ್ನು ತಮ್ಮ ವಾರ್ಡಿನ ಗ್ರಾಮ ಪಂಚಾಯ್ತಿ ಸದಸ್ಯ ಸಿದ್ದಪ್ಪ ಕುಂಬಾರ ಅವರ ಅಭಿವೃದ್ಧಿ ಕಾಮಗಾರಿ ಕುರಿತು ಶಿವಾನಂದ ಮೆಚ್ಚುಗೆ ವ್ಯಕ್ತಪಡಿಸಿದ್ರು.

ವಾರ್ಡಿನ ಅನೇಕ ಕಡೆಗಳಲ್ಲಿ ಕಾಂಕ್ರೀಟ್ ರಸ್ತೆ, ಶೌಚಾಲಯ ಸೇರಿದಂತೆ ಯಾರಿಂದಲೂ ಒಂದು ರೂಪಾಯಿಯನ್ನೂ ಪಡೆಯದೇ ಸಿದ್ದಪ್ಪ ಅಭಿವೃದ್ಧಿ ಕೆಲಸ ಮಾಡಿಸಿದ್ದಾರೆ ಎಂದು ಇನ್ನೋರ್ವ ಗ್ರಾಮಸ್ಥ ಚಂದ್ರು ಸಂಶಿ ಹೇಳಿದ್ರು.

ಸಿದ್ದಪ್ಪ ಕುಂಬಾರ ಒಬ್ಬ ಗಾರೆ ಕೆಲಸದ ಮೇಸ್ತ್ರಿ. ಅಭಿವೃದ್ಧಿ ಕೆಲಸಗಳನ್ನು ಮಾಡಲೇಬೇಕು ಎಂದು ಪಂಚಾಯ್ತಿ ಚುನಾವಣೆಗೆ ನಿಂತು, ಸದಸ್ಯರಾಗಿ ಆಯ್ಕೆಯಾಗಿದ್ರು. ಅಂದುಕೊಂಡಂತೆ ತಮ್ಮ ವಾರ್ಡಿನಲ್ಲಿ ಪಂಚಾಯ್ತಿಯ ಎಲ್ಲಾ ಯೋಜನೆಗಳಡಿ ಕೆಲಸ ಮಾಡಿಸಿ ತಮ್ಮ ವಾರ್ಡಿನ ಜನರಿಂದ ಸೈ ಎನಿಸಿಕೊಂಡಿದ್ದಾರೆ. ಇವರ ಅಭಿವೃದ್ಧಿ ಕಾರ್ಯಗಳಿಗೆ ನಾವೂ ಒಂದು ಮೆಚ್ಚುಗೆ ವ್ಯಕ್ತಪಡಿಸಲೇಬೇಕಲ್ಲವೇ?

Edited By : Manjunath H D
Kshetra Samachara

Kshetra Samachara

02/12/2020 11:32 am

Cinque Terre

42.88 K

Cinque Terre

14

ಸಂಬಂಧಿತ ಸುದ್ದಿ