ಕುಂದಗೋಳ : ಪ್ರಭಾರಿ ಅಧಿಕಾರಿಯಲ್ಲೇ ಕಳೆದ ಹಲವಾರು ವರ್ಷಗಳಿಂದ ಕರ್ತವ್ಯ ಮುನ್ನೆಡೆಸಿ, ರೈತರಿಗೆ ಸಮರ್ಪಕ ಇಲಾಖೆ ಸೇವೆ ನೀಡಲಾಗದೆ ಇದ್ದ ಕಚೇರಿಯೊಂದಕ್ಕೆ ಪಬ್ಲಿಕ್ ನೆಕ್ಸ್ಟ್ ವರದಿ ಪರಿಣಾಮ ಖಾಯಂ ಅಧಿಕಾರಿ ಭಾಗ್ಯ ಒದಗಿ ಬಂದಿದೆ.
ಹೌದು ! ಕುಂದಗೋಳ ತಾಲೂಕಿನ ಹಿರಿಯ ತೋಟಗಾರಿಕೆ ನಿರ್ದೇಶಕರ ಕಚೇರಿ ಪ್ರಭಾರಿ ಅಧಿಕಾರಿ ಹಾಗೂ ಸಿಬ್ಬಂದಿಗಳ ಬರದಲ್ಲೇ ಕರ್ತವ್ಯ ಮುಂದುವರೆಸಿತ್ತು, ಈ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಸತತ ವರದಿ ಬಿತ್ತರಿಸಿದ ಪರಿಣಾಮ ಹಿರಿಯ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಖಾಯಂ ಸಹಾಯಕ ತೋಟಗಾರಿಕೆ ಅಧಿಕಾರಿ ಭಾಗ್ಯದ ಜೊತೆ ಒಂದು ತೋಟಗಾರಿಕೆ ಸಹಾಯಕರ ಹುದ್ದೆ ಭರ್ತಿ ಮಾಡಲಾಗಿದೆ. ಅಧಿಕಾರಿಗಳ ಹುದ್ದೆ ಭರ್ತಿಯಿಂದ ರೈತಾಪಿ ಜನರಿಗೆ ಇಲಾಖೆ ಸೌಲಭ್ಯ, ಸಹಕಾರ, ಇಲಾಖೆಯ ಯೋಜನೆ ಸರಿಯಾಗಿ ತಲುಪುತ್ತಿದ್ದು ರೋಗಕ್ಕೆ ತುತ್ತಾಗಿ ಬಳಲಿ ಹೋಗುವ ತೋಟಗಾರಿಕೆ ಬೆಳೆ ಮೆಣಸಿನಕಾಯಿಗೆ ಉಪಚಾರದ ಮಾರ್ಗ ಸಿಗಲಿದೆ.
ಇನ್ನೂ ಕಳೆದ ಜೂನ್.16 ರಂದೇ ಖಾಯಂ ಅಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾದ ಸಹಾಯಕ ತೋಟಗಾರಿಕೆ ಅಧಿಕಾರಿ ಇಲಾಖೆ ಪ್ರಯೋಜನದ ಬಗ್ಗೆ ತಿಳಿಸಿದ್ದು ಹೀಗೆ.
ಒಟ್ಟಾರೆ ಅಧಿಕಾರಿಗಳೇ ಇಲ್ಲದೆ ಅತಂತ್ರವಾಗಿದ್ದ ತೋಟಗಾರಿಕೆ ಇಲಾಖೆಗೆ ಖಾಯಂ ಅಧಿಕಾರಿ, ತೋಟಗಾರಿಕೆ ಸಹಾಯಕ ಹುದ್ದೆ ಜೀವ ತುಂಬಿದ್ದು ರೈತಾಪಿ ಜನರಿಗೆ ಸಕಾಲಕ್ಕೆ ಸೇವೆ ಸಿಗುವ ವಿಶ್ವಾಸವಿದೆ.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್, ಕುಂದಗೋಳ
Kshetra Samachara
29/06/2022 08:25 pm