ಧಾರವಾಡ: ಕರ್ನಾಟಕ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡ ತವನಪ್ಪ ಅಷ್ಟಗಿ ಅವರು ಅಧಿಕೃತವಾಗಿ ಅಧಿಕಾರ ಪಡೆದುಕೊಂಡರು.
ತಮ್ಮ ತಂಡದೊಂದಿಗೆ ಚಿತ್ರದುರ್ಗಕ್ಕೆ ತೆರಳಿದ ಅಷ್ಟಗಿ, ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು. ಶಾಸಕ ಅಮೃತ ದೇಸಾಯಿ ಕೂಡ ತವನಪ್ಪ ಅಷ್ಟಗಿ ಅವರೊಂದಿಗೆ ಚಿತ್ರದುರ್ಗಕ್ಕೆ ತೆರಳಿ ಅವರಿಗೆ ಸಾಥ್ ನೀಡಿದರು.
ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ತವನಪ್ಪ ಅಷ್ಟಗಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಅಮೃತ ದೇಸಾಯಿ ಅವರು ಪ್ರಯತ್ನದಿಂದ ನಾನು ಈ ಮಂಡಳಿಯ ಅಧ್ಯಕ್ಷನಾಗಿದ್ದೇನೆ. ಈ ಮಂಡಳಿ ವ್ಯಾಪ್ತಿಗೆ 16 ಜಿಲ್ಲೆಗಳು ಬರುತ್ತವೆ. ಎಲ್ಲ ಜಿಲ್ಲೆಗಳ ಪ್ರಗತಿ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಅಲ್ಲದೇ ನನಗೆ ಕೊಟ್ಟ ಈ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಬಿಜೆಪಿ ರಾಜ್ಯ ಅಧ್ಯಕ್ಷ ನಳೀನಕುಮಾರ ಕಟೀಲ್, ಶಾಸಕ ಅರವಿಂದ ಬೆಲ್ಲದ ಅವರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದರು.
Kshetra Samachara
13/08/2022 04:16 pm