ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸರ್ಕಾರದ ನಿರ್ಧಾರ ವಿರೋಧಿಸಿದ ಗುರಿಕಾರ

ಧಾರವಾಡ: 1ನೇ ತರಗತಿಗೆ 5 ವರ್ಷ 5 ತಿಂಗಳ ಬದಲಾಗಿ 6 ವರ್ಷಕ್ಕೆ ದಾಖಲಾತಿ ಮಾಡಲು ಸರ್ಕಾರ ಹೊರಡಿಸಿದ ಆದೇಶವನ್ನು ವಾಪಸ ಪಡೆದು ಮೊದಲಿನಂತೆ 5 ವರ್ಷ 5 ತಿಂಗಳಿಗೆ 1 ನೇ ತರಗತಿಗೆ ದಾಖಲಾತಿ ಹೊಂದಲು ಅವಕಾಶ ನೀಡಬೇಕೆಂದು ಅಖಿಲ ಭಾರತ ಶಿಕ್ಷಕರ ಫೆಡರೇಷನ್ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಶಿಕ್ಷಣ ಹಕ್ಕು ಕಾಯ್ದೆಯಲ್ಲಿರುವ ಎಲ್ಲ ಅಂಶಗಳನ್ನು ಸರ್ಕಾರ ಇಲ್ಲಿಯವರೆಗೆ ಜಾರಿಗೆ ತಂದಿಲ್ಲ ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಎಲ್ಲ ಶಾಲೆಗಳಿಗೆ ಅಗತ್ಯವಾದ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಆದರೆ ಇಲ್ಲಿಯವರೆಗೂ ಮೂಲಭೂತ ಸೌಲಭ್ಯ ಒದಗಿಸಿರುವುದಿಲ್ಲ, ವಿಷಯ ವಾರು, ವರ್ಗವಾರು ಶಿಕ್ಷಕರ ನೇಮಕವಾಗಿರುವದಿಲ್ಲ. ಶಿಕ್ಷಣ ಹಕ್ಕು ಕಾಯ್ದೆಯಲ್ಲಿರುವ ಅಂಶಗಳನ್ನು ಮೊದಲು ಜಾರಿಗೆ ತರುವದನ್ನು ಬಿಟ್ಟು ಶಿಕ್ಷಣ ಹಕ್ಕು ಕಾಯ್ದೆ ನೆಪದಲ್ಲಿ ಶಾಲಾ ದಾಖಲಾತಿ ವಯೋಮಿತಿ ಹೆಚ್ಚಳದಿಂದ ಆರಂಭದಲ್ಲಿಯೇ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಸರ್ಕಾರ ಪೂರ್ವಾಪರ ವಿಚಾರ ಮಾಡದೇ ಈ ಆದೇಶ ಮಾಡಿದೆ. ಈ ಹಿಂದೆ ಶಿಕ್ಷಣ ತಜ್ಞರು, ಪಾಲಕ ಪೋಷಕರ ಅಬಿಪ್ರಾಯದ ಮೇರೆಗೆ 5 ವರ್ಷ 5 ತಿಂಗಳು ತುಂಬಿದ ವಿದ್ಯಾರ್ಥಿಗಳಿಗೆ 1ನೇ ತರಗತಿಗೆ ಪ್ರವೇಶ ಹೊಂದಲು ಆದೇಶ ಮಾಡಲಾಗಿದೆ ಆದ್ದರಿಂದ ಈ ಹಿಂದಿನ ಆದೇಶವನ್ನೇ ಮುಂದುವರೆಸಬೇಕೆಂದು ಗುರಿಕಾರ ಒತ್ತಾಯಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

27/07/2022 07:11 pm

Cinque Terre

8.11 K

Cinque Terre

0

ಸಂಬಂಧಿತ ಸುದ್ದಿ