ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಾಹ್ಮಿ ಮೂಹರ್ತದ ಯೋಗ ಸಾಧನೆಯು ಏಕಾಗ್ರತೆ ಹೆಚ್ಚಿಸುತ್ತದೆ: ಎಸ್‌ಪಿ ಪಿ.ಕೃಷ್ಣಕಾಂತ

ಧಾರವಾಡ: ವಿದ್ಯಾರ್ಥಿಗಳು ಬೆಳಗಿನ ಬ್ರಾಹ್ಮಿ ಮೂಹರ್ತದಲ್ಲಿ ಯೋಗ ಸಾಧನೆ ಮಾಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ. ಎಲ್ಲರೂ ಪ್ರಾಣಾಯಾಮ, ಆಸನ, ಧ್ಯಾನ ಮಾಡುವುದರಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ ಆಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಹೇಳಿದರು.

ಧಾರವಾಡ ಜಿಲ್ಲಾ ಪೊಲೀಸ್ ತಾತ್ಕಾಲಿಕ ತರಬೇತಿ ಶಾಲೆ ಹಾಗೂ ಎನ್.ಎ.ಮುತ್ತಣ್ಣ ಸ್ಮಾರಕ ಪೊಲೀಸ್‍ ಮಕ್ಕಳ ವಸತಿ ಶಾಲೆಯ ಸಹಯೋಗದಲ್ಲಿ ಆಯೋಜಿಸಿದ್ದ 8ನೇಯ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಯೋಗ ಸಾಧನೆ ಮಾಡುವುದರಿಂದ ಮಾನಸಿಕ ಕಾಯಿಲೆ ಹಾಗೂ ಶ್ವಾಸಕೋಶ ತೊಂದರೆಗಳು ನಿವಾರಣೆಯಾಗುತ್ತವೆ. ದೈಹಿಕ ಆರೋಗ್ಯ ಸಧೃಡಗೊಳ್ಳುತ್ತದೆ. ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಯೋಗ ಸಾಧನೆ ಮಾಡಬೇಕೆಂದು ಅವರು ಹೇಳಿದರು.

ಪೊಲೀಸ್ ಮಕ್ಕಳ ವಸತಿ ಶಾಲೆಯ ಯೋಗ ಶಿಕ್ಷಕ ಡಾ.ಪ್ರಕಾಶ ಪವಾಡಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಯೋಗಾಸನವನ್ನು ಮಾಡಿಸಿದರು. ಡಿಸಿಆರ್‌ಬಿಯ ಡಿಎಸ್‍ಪಿ ಚಂದ್ರಕಾಂತ ಪೂಜಾರಿ, ಬಿ.ಆರ್.ಚೆನ್ನಮ್ಮನವರ ಮತ್ತು ಆರ್‌ಎಸ್‍ಐ ಹದ್ದನ್ನವರ ಉಪಸ್ಥಿತರಿದ್ದರು.

200 ಜನ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳು, 100 ಜನ ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿ, ಪೊಲೀಸ್ ತರಬೇತಿ ಶಾಲೆಯ ಬೋಧಕ ಸಿಬ್ಬಂದಿ ವರ್ಗದವರು ಯೋಗ ಶಿಬಿರದಲ್ಲಿ ಪಾಲ್ಗೊಂಡಿದ್ದರು.

Edited By : PublicNext Desk
Kshetra Samachara

Kshetra Samachara

21/06/2022 07:28 pm

Cinque Terre

9 K

Cinque Terre

0

ಸಂಬಂಧಿತ ಸುದ್ದಿ