ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೂ.15 ರಂದು ಹಿರಿಯ ನಾಗರಿಕರ ಶೋಷಣೆ ವಿರುದ್ಧ ಜಾಗೃತಿ ದಿನ ಆಯೋಜನೆ

ಧಾರವಾಡ: ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಇವರ ಸಹಯೋಗದಲ್ಲಿ ಜೂನ್ 15 ರಂದು ಬೆಳಗ್ಗೆ 10.30 ಕ್ಕೆ ಧಾರವಾಡದಲ್ಲಿ ವಿಶ್ವ ಹಿರಿಯ ನಾಗರಿಕರ ಶೋಷಣೆ ವಿರುದ್ಧ ಜಾಗೃತಿ ದಿನವನ್ನು ಹಮ್ಮಿಕೊಳ್ಳಲಾಗಿದೆ.

ಹಿರಿಯರ ಮೇಲಿನ ದೌರ್ಜನ್ಯ ಮತ್ತು ಹಿರಿಯರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಜಾಥಾ, ಬೀದಿನಾಟಕ, ಕರಪತ್ರ ವಿತರಣಾ ಕಾರ್ಯಕ್ರಮವು ಜುಬಲಿ ಸರ್ಕಲ್ ವೃತ್ತದಿಂದ ಪ್ರಾರಂಭಗೊಂಡು ಹಳೆಬಸ್ ಸ್ಟ್ಯಾಂಡ್ ಬಳಿ ಮುಕ್ತಾಯಗೊಳ್ಳಲಿದೆ. ಜಾಥಾ ಕಾರ್ಯಕ್ರಮವು ಮುಕ್ತಾಯಗೊಂಡ ನಂತರ ಸಿ.ಬಿ.ಟಿ ಮತ್ತು ಹಳೆ ಬಸ್ ಸ್ಟ್ಯಾಂಡ ಹತ್ತಿರ ಬೀದಿ ನಾಟಕವನ್ನು ಸಾರ್ವಜನಿಕ ಸ್ಥಳದಲ್ಲಿ ಪ್ರದರ್ಶಿಸಲಾಗುವುದು.

ಕಾರ್ಯಕ್ರಮದಲ್ಲಿ ಕಾನೂನು ಇಲಾಖೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿಗಳು ಮತ್ತು ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

10/06/2022 07:49 pm

Cinque Terre

7.34 K

Cinque Terre

0

ಸಂಬಂಧಿತ ಸುದ್ದಿ