ಹುಬ್ಬಳ್ಳಿ: ರೈಲ್ವೆ ನಿಲ್ದಾಣ ಆವರಣದ ದ್ವಿಚಕ್ರ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ವೊಬ್ಬರು ಹ್ಯಾಂಡ್‌ಲಾಕ್ ಮಾಡಿ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ.
ಹೌದು, ಕುಂದಗೋಳ ತಾಲೂಕು ಹಿರೇನರ್ತಿಯ ಗ್ರಾಮದ ಕಾನ್ಸ್ಟೇಬಲ್ ರಮೇಶ ಎಂಬುವರೆ ಬೈಕ್ ಕಳೆದುಕೊಂಡವರು. ಇವರು ರಾತ್ರಿ 8 ಗಂಟೆಗೆ ರೈಲ್ವೆ ನಿಲ್ದಾಣದ ಶ್ರೀ ಸಿದ್ಧಾರೂಢಸ್ವಾಮಿ ಮೂರ್ತಿ ಎದುರಿನ ವಾಹನಗಳ ಪಾರ್ಕಿಂಗ್ ಸ್ಥಳದಲ್ಲಿಟ್ಟು ಸಹೋದರನನ್ನು ರೈಲಿಗೆ ಹತ್ತಿಸಿ 8:20 ಗಂಟೆಗೆ ವಾಪಸ್ ಬರುವುದರೊಳಗೆ ಕಳ್ಳರು ಬೈಕ್ ಕಳವು ಮಾಡಿದ್ದಾರೆ.
ಈ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
11/04/2022 11:17 am