ಧಾರವಾಡ: ಧಾರವಾಡದಲ್ಲಿ ಮಧ್ಯಾಹ್ನದ ನಂತರ ಗುಡುಗು, ಗಾಳಿ ಸಹಿತ ಮಳೆಯಾಗಿದೆ.
ಬೆಳಿಗ್ಗೆಯಿಂದ ಬಿಸಿಲಿನ ವಾತಾವರಣವಿತ್ತು. ಸೆಖೆಯ ಪ್ರಮಾಣ ಕೂಡ ಹೆಚ್ಚಾಗಿತ್ತು. ಸಂಜೆಯ ಹೊತ್ತಿಗೆ ಮಳೆ ಸುರಿಯಬಹುದು ಎಂದುಕೊಂಡವರ ನಿರೀಕ್ಷೆಯನ್ನು ಹುಸಿಗೊಳಿಸದ ಮಳೆರಾಯ ಸಂಜೆ ಹೊತ್ತಿಗೆ ಗುಡುಗು ಸಹಿತ ಸುರಿದಿದ್ದಾನೆ.
ಮೊದಲಿಗೆ ಗಾಳಿಯ ಆರ್ಭಟ ಜೋರಾಗಿತ್ತು. ಅದರ ನಂತರ ಮಳೆ ಕೂಡ ಬಂದು ಸೆಖೆಯಿಂದ ಕಂಗೆಟ್ಟಿದ್ದ ಧಾರವಾಡದ ಜನತೆಗೆ ತಂಪನೆರೆದಿದೆ.
Kshetra Samachara
04/04/2022 07:32 pm