ಧಾರವಾಡ: ಧಾರವಾಡ ಜಿಲ್ಲೆಯಲ್ಲಿರುವ ಖಾದ್ಯ ತೈಲ ಮತ್ತು ಖಾದ್ಯ ತೈಲ ಬೀಜಗಳ ಸಂಸ್ಕರಣಾದಾರರು, ಆಮದುದಾರರು, ಗಿರಣಿದಾರರು, ಸಗಟು ಮಾರಾಟದಾರರು ಮತ್ತು ದಾಸ್ತಾನುದಾರರು ತಮ್ಮಲ್ಲಿರುವ ಖಾದ್ಯ ತೈಲ ಮತ್ತು ಖಾದ್ಯ ತೈಲ ಬೀಜಗಳ ದಾಸ್ತಾನು ವಿವರಗಳನ್ನು ಕೇಂದ್ರ ಸರ್ಕಾರದ ವೆಬ್‌ಸೈಟ್ http://evegoils.nic.in/eosp/Register ಮೂಲಕ ಪ್ರದರ್ಶಿಸಲು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸೂಚಿಸಿದೆ
ಒಂದು ವೇಳೆ ನೋಂದಣಿ ಮಾಡಿಕೊಳ್ಳದೇ ಇದ್ದರೆ ಅಂತಹ ಸಂಸ್ಕರಣಾದಾರರು, ಆಮದುದಾರರು, ಗಿರಣಿದಾರರು, ಸಗಟು ಮಾರಾಟದಾರರು ಮತ್ತು ದಾಸ್ತಾನುದಾರರ ವಿರುದ್ಧ ಕರ್ನಾಟಕ ಅಗತ್ಯ ವಸ್ತುಗಳ ( ಲೆಕ್ಕಪತ್ರಗಳ ನಿರ್ವಹಣೆ ಮತ್ತು ದರ ಪ್ರದರ್ಶನ ) ಆದೇಶ 1981 ರ ಮೇರೆಗೆ ಸೂಕ್ತ ಕ್ರಮ ಜರುಗಿಸಲಾಗುವುದು, ಸರ್ಕಾರದ ಅಧಿಸೂಚನೆಯನ್ವಯ ಖಾದ್ಯ ತೈಲ ಎಣ್ಣೆಕಾಳು ಚಿಲ್ಲರೆ ಹಾಗೂ ಸಗಟು ವಿತರಕರು ನಿಗದಿಪಡಿಸಿದ ಖಾದ್ಯ ತೈಲ ಹಾಗೂ ಎಣ್ಣೆಕಾಳು ದಾಸ್ತಾನು ಮಾಡಿಕೊಳ್ಳಲು ಮಾತ್ರ ಅವಕಾಶವಿದ್ದು, ಹೆಚ್ಚಿಗೆ ದಾಸ್ತಾನು ಮಾಡಿದ ವಿತರಕರ ವಿರುದ್ಧ ಕ್ರಮವಹಿಸಲಾಗುವುದು ಎಂದು ಇಲಾಖೆಯ ಉಪನಿರ್ದೇಶಕ ಸುಧೀರ್ ಸಾವ್ಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
25/03/2022 09:15 pm