ಧಾರವಾಡ: ಸಲೀಂ ಚಿಕ್ಕೋಡಿ ಎಂಬುವವರಿಗೆ ದಿನಾಂಕ:14-09-2021 ರಂದು ರಾತ್ರಿ 10.00 ಗಂಟೆಯ ಸುಮಾರಿಗೆ ನವಲಗುಂದದ ಕೆಎಸ್‌ಆರ್‌ಟಿಸಿ ಬಸ್ ಡಿಪೊ ಬಳಿ ಇರುವ ಅಪ್ಪಾಜಿ ದಾಬಾದ ಬಳಿ ಮುಳ್ಳಿನ ಕಂಟಿಯಲ್ಲಿ ಅಂದೇ ಜನಿಸಿದ ಗಂಡು ಮಗು ದೊರೆತಿದ್ದು, ಈ ಮಗುವಿಗೆ ಅಗತ್ಯ ಮೂಲ ಭೂತ ಸೌಕರ್ಯಗಳನ್ನು ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸಿದ್ದಾರೆ.
ದಿನಾಂಕ:08-12-2021 ರಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಈ ರೀತಿಯಾಗಿ ಸಿಕ್ಕ ಮಗುವನ್ನು ಸಾಕುವುದು ಅಪರಾಧವೆಂದು ತಿಳಿಸಿ, ನವಲಗುಂದ ಪೊಲೀಸ್ ಠಾಣೆಯಲ್ಲಿ ಐ.ಪಿ.ಸಿ ಕಲಂ 317 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ದಿನಾಂಕ:09-12-2021 ರಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರ ಆದೇಶದನ್ವಯ ಮಗುವನ್ನು ಅಮೂಲ್ಯ (ಜಿ) ಶಿಶುಗೃಹ ಸಂಸ್ಥೆಗೆ ತಾತ್ಕಾಲಿಕ ಪಾಲನೆ-ಪೋಷಣೆಗಾಗಿ ದಾಖಲಿಸಿ, ಮಗುವಿಗೆ ಅಥರ್ವ ಎಂದು ಸಂಸ್ಥೆಯಿಂದ ನಾಮಕರಣ ಮಾಡಲಾಗಿದೆ.
ಈ ಮಗುವಿನ ಪಾಲಕರು, ಪೋಷಕರ ಕುರಿತು ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ. ಆದ್ದರಿಂದ ಮಗುವಿನ ಪಾಲಕರು, ಪೋಷಕರ ಕಾನೂನು ರೀತಿ ಹಕ್ಕುಳ್ಳವರು ಎಲ್ಲಿದ್ದರೂ 02 ತಿಂಗಳ ಅವಧಿ ಮುಗಿಯುವದರ ಒಳಗಾಗಿ ಅಮೂಲ್ಯ(ಜಿ) ಶಿಶುಗೃಹ ಹುಬ್ಬಳ್ಳಿ ಅಧೀಕ್ಷಕರನ್ನು ಅಥವಾ ನವಲಗುಂದ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು. ಒಂದು ವೇಳೆ ಯಾರೂ ವಾರಸದಾರರು ಬಾರದ ಪಕ್ಷದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
17/03/2022 10:03 pm